ಬೆಂಗಳೂರು,ಮಾ.9: ಭಾರತವು ಮಹಿಳೆಯರ ಪರವಾಗಿದೆ ಎಂಬುದಕ್ಕೆ ಭಾರತದ ರಾಷ್ಟ್ರಪತಿ ಮಹಿಳೆ ಯಾಗಿರುವುದೇ ಒಂದು ನಿದರ್ಶನ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿ ತಿಳಿಸಿದರು.

ಬೆಂಗಳೂರಿನ ಶಾಂತಿನಗರದ ಪುನೀತ್ ರಾಜಕುಮಾರ್ ಕನ್ನಡ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಎಲ್ಲಾ ಹಂತಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗಬೇಕು,ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆ ತಡೆಯುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಜಾನಪದ ಬಾಲಾಜಿ ಮನವಿ ಮಾಡಿದರು.

ಕಾಲೇಜ್ ಕುಮಾರ್ ಸಂಘಟಕಿ ಕವಿ ಸಾಹಿತಿ ಮಂಜುಳಾ ಪಾವಗಡ, ಹುಬ್ಬಳ್ಳಿಯ ಡಾ ಸಿದ್ದಾರ್ಥ ಸ್ವಾಮೀಜಿ, ಖ್ಯಾತ ನಟಿ ಲಾವಣ್ಯ ಗಂಗಾಧರಯ್ಯ, ಶಾಲಿನಿ, ಲಿಂಗರಾಜು ಕೆ.ಎಸ್, ಪಾರ್ವತಿ, ಡಾ ಅನುರಾಧ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.