ಶ್ರೀ ಐಜಿ ಸೇವಾ ಸಮಿತಿಯಿಂದಕ್ಲೀನ್ ಪ್ಲೇಟ್ ಅಭಿಯಾನಕ್ಕೆ ಚಾಲನೆ

Spread the love

ಮೈಸೂರು: ಮೈಸೂರಿನ ಶ್ರೀ ಐಜಿ ಸೇವಾ ಸಮಿತಿಯು ನಿಜಕ್ಕೂ ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಿದ್ದು ಇತರರಿಗೆ ಮಾದರಿಯಾಗಿದ್ದಾರೆ.

ಮೈಸೂರಿನ ವಿಜಯನಗರದ ಲ್ಲಿರುವ ಕೇರಳ ಸಮಾಜದ ಕಲ್ಯಾಣ ಮಂಟಪದಲ್ಲಿ ಶ್ರೀ ಐಜಿ ಸೇವಾ ಸಮಿತಿ ವತಿಯಿಂದ ಕ್ಲೀನ್ ಪ್ಲೇಟ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಸಮಿತಿಯ ಸಂಚಾಲಕ ಕರ್ಮಾರಂ ಅವರು ಮಾತನಾಡಿ,ಅನ್ನದಾನ ಮಹಾದಾನ. ಆಹಾರ ಚೆಲ್ಲುವ ಮುನ್ನ ಯೋಚಿಸಿ, ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿರುತ್ತದೆ ಎಂದು ಹೇಳಿದರು.

ಈ ಉದ್ದೇಶದಿಂದ‌ ನಮ್ಮ ಸಿರ್ವಿ
ಸಮಾಜದ ಕಡೆಯಿಂದ ನಡೆಯುವ ಶುಭ ಸಮಾರಂಭಗಳಿಗೆ ಭೇಟಿ ನೀಡಿ ಊಟ ಆಗಿ
ಕೈ ತೊಳೆಯುವ ಸ್ಥಳದಲ್ಲಿ ಪ್ಲೇಟ್ ನಲ್ಲಿ ಆಹಾರಗಳನ್ನು ಬಿಸಾಡಿದರೆ ಅವರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.

ಪ್ಲೇಟ್ ನಲ್ಲಿ ಇರುವ ಎಲ್ಲಾ ಆಹಾರಗಳನ್ನು ಸೇವಿಸುವಂತೆ ಉತ್ತೇಜಿಸಲಾಗುವುದು
ಹಾಗೂ ಆಹಾರದ ಬಗ್ಗೆ ಜಾಗೃತಿ ಸಹ ಮೂಡಿಸಲಾಗುವುದು ಎಂದು ಹೇಳಿದರು.

ಸದ್ಯಕ್ಕೆ ನಮ್ಮ ಸಮಾಜದ ಬಂಧುಗಳ ಸಮಾರಂಭ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸತ್ತಿದ್ದೇವೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಲ್ಯಾಣ ಮಂಟಪಗಳಿಗೂ ತೆರಳಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ತಂಡದ ಸದಸ್ಯರಾದ ಚೆನಾರಾಮ್, ಧರ್ಮಿಚಂದ್, ಮಂಗಳಾರಮ್, ಅಮರ್, ಗೌತಮ್, ದಿನೇಶ್ ಮತ್ತಿತರರು ಹಾಜರಿದ್ದರು.