ಮೈಸೂರು: ಐಪಿಎಲ್ ನಲ್ಲಿ ಈ ಬಾರಿ ಆರ್ ಸಿ ಬಿ ಜಯಗಳಿಸಿದರೆ ಮೈಸೂರಿನ ಇಂದಿರಾ ಕ್ಯಾಂಟೀನ್ ಗಳಲ್ಲಿ ಹೋಳಿಗೆ ಊಟ ಹಾಕಿಸುವುದಾಗಿ ಕ್ರಿಕೆಟ್ ಅಭಿಮಾನಿ ಬಸವರಾಜ ಬಸಪ್ಪ ತಿಳಿಸಿದ್ದಾರೆ.
18 ವರ್ಷದಿಂದ ಐಪಿಎಲ್ ನಲ್ಲಿ ರಾಯಲ್ ಚಾಲೆಂಜ್ ಬೆಂಗಳೂರು ಕಪ್ ಗಾಗಿ ಪ್ರಯತ್ನಪಡುತ್ತಿದ್ದು,ಈ ಬಾರಿ ಗೆಲ್ಲುವ ವುಶ್ವಾಸವಿದೆ ಎಂದು ಕೆ ಆರ್ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕ್ರಿಕೆಟ್ ಪ್ರೇಮಿ ಬಸವರಾಜ್ ಬಸಪ್ಪ ಹೇಳಿದ್ದಾರೆ.
ನಮ್ಮ ಆರ್‌ಸಿಬಿ ತಂಡ ಈ ಬಾರಿ ಕಪ್ ಗೆದ್ದರೆ ಮೈಸೂರು ನಗರದ ಇಂದಿರಾ ಕ್ಯಾಂಟೀನ್ ಗಳಲ್ಲಿ ಹೋಳಿಗೆ ಊಟ ಹಾಕಿಸುವ ಮೂಲಕ ಸಂಭ್ರಮಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಆರ್‌ಸಿಬಿ ಗೆದ್ದರೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಲ್ಲಿ ಜೂನ್ 4 ರಂದು
ಮಧ್ಯಾನ ಒಂದು ಹೊತ್ತು ಸಾರ್ವಜನಿಕರಿಗೆ ಹೋಳಿಗೆ ಊಟವನ್ನು ಉಚಿತವಾಗಿ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಬಸವರಾಜ್ ಬಸಪ್ಪ ಮನವಿ ಮಾಡಿದ್ದಾರೆ.