ಕರ್ನಾಟಕ ಬ್ಯಾಂಕ್ ಗೆ ವಂಚಿಸಿದ ಕತರ್ನಾಕ್ದಂಪತಿ

Spread the love

ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಕರ್ನಾಟಕ ಬ್ಯಾಂಕ್ ಗೆ ಕತರ್ನಾಕ್ ದಂಪತಿ 26 ಲಕ್ಷ ವಂಚಿಸಿದ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

ಕಾನೂನು ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.

ಮೀನಾಕ್ಷಿ ಹಾಗೂ ಗಣೇಶ್ ಬಾಬು ಎಂಬ ದಂಪತಿ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.

2019 ರಲ್ಲಿ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಕರ್ನಾಟಕ ಬ್ಯಾಂಕ್ ನಲ್ಲಿ ವ್ಯಾಪಾರದ ಉದ್ದೇಶಕ್ಕಾಗಿ ಗಣೇಶ್ ಬಾಬು ಅವರ ಪತ್ನಿ ಮೀನಾಕ್ಷಿ ಹೆಸರಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

ಸಾಲಕ್ಕಾಗಿ ಬೋಗಾದಿಯ ರಾಜರಾಜೇಶ್ವರಿ ನಗರ ಬಡಾವಣೆಯ ನಿವೇಶನ ಸಂಖ್ಯೆ 28/ಬಿ ಗೆ ಸಂಭಂಧಿಸಿದ ದಾಖಲೆ ನೀಡಿದ್ದಾರೆ.26 ಲಕ್ಷ ರೂ ಸಾಲ ಮಂಜೂರಾಗಿ ಮೀನಾಕ್ಷಿ ಯವರ ಖಾತೆಗೆ ವರ್ಗಾವಣೆ ಆಗಿದೆ.

ನಂತರ ಸಾಲ ಮರುಪಾವತಿಸುವಲ್ಲಿ ಮೀನಾಕ್ಷಿ ವಿಫಲವಾಗಿದ್ದಾರೆ.ನಿವೇಶನ ಹರಾಜು ಹಾಕಲು ಮುಂದಾದಾಗ ನಕಲಿ ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದ್ದು, ದಂಪತಿ ವಿರುದ್ದ ಪ್ರಕರಣ ದಾಖಲಾಗಿದೆ.