(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)
ಚಾಮರಾಜನಗರ: ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಂದು ನಾಪತ್ತೆ ದೂರು ದಾಖಲಿಸಿ ಯಾಮಾರಿಸಲು ಯತ್ನಿಸಿದ ನಾಟಕಗಾತಿ ಪತ್ನಿ ಹಾಗೂ ಪ್ರಿಯಕರ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಜನ್ನೂರು ಗ್ರಾಮದ ನಿವಾಸಿ ರಮೇಶ್ (45) ಅವರನ್ನು ನಾಪತ್ತೆಯಾಗಿಧ್ದಾರೆಂದು ಪತ್ನಿ ಗೀತಾ ದೂರು ದಾಖಲಿಸಿ ಪೊಲೀಸರನ್ನೇ ಯಾಮಾರಿಸಹೊರಟಿದ್ದಳು.
ಆದರೆ ದೂರುದಾರೆಯ ನಡೆ ಪೊಲೀಸರಿಗೆ ಅನುಮಾನ ಮೂಡಿಸಿದ ಹಿನ್ನಲೆಯಲ್ಲಿ ತನಿಖೆ ಆರಂಬಿಸಿದಾಗ ಪ್ರಿಯಕರನೊಂದಿಗೆ ಸೇರಿ ಪತ್ನಿ ಗೀತಾ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದು ಇದೀಗ ಇಬ್ಬರನ್ನು ಬಂದಿಸಿ ನ್ಯಾಯಾಂಗ ಬಂದನಕ್ಕೊಪ್ಪಿಸಿಧ್ದಾರೆ.
ಪಿರ್ಯಾದುದಾರೆ ಗೀತಾ ಕುದೇರು ಠಾಣೆಗೆ ಬಂದು ತನ್ನ ಪತಿ ರಮೇಶ ಅವರು ನಾಪತ್ತೆಯಾಗಿದ್ದು ವಾಪಸ್ಸು ಬಂದಿಲ್ಲ, ಆಗಾಗ್ಗೆ ಹೊರಗೆ ಹೋಗುತ್ತಿದ್ದು ವಾಪಸ್ಸು ಬರುತ್ತಿದ್ದರು. ಆದರೆ,ಜ.14 ರಂದು ರಾತ್ರಿ ಹೋದವರು ಬಂದಿಲ್ಲ ಎಂದು ಜನವರಿ ೨೧ ರಂದು ನಾಪತ್ತೆ ದೂರು ನೀಡಿದ್ದಳು.
ನಾಪತ್ತೆ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಿಯಕರ ಗುರುಪಾದಸ್ವಾಮಿಗೂ ನನಗೂ ಅಕ್ರಮ ಸಂಬಂಧವಿದ್ದು ಇಬ್ಬರು ಸೇರಿ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿ ಮೃತದೇಹವನ್ನ ಕುಪ್ಪೇಗಾಲದ ಕಪಿಲ ನದಿಗೆ ಬೀಸಾಡಿ ಯಾರಿಗೂ ಅನುಮಾನ ಬರಬಾರದೆಂದು ನಾಪತ್ತೆ ದೂರು ನೀಡಿದ್ದಾಗಿ ವಿಚಾರಣೆ ವೇಳೆ ಗೀತಾ ಒಪ್ಪಿಕೊಂಡಿದ್ದಾಳೆ.
ಪೊಲೀಸರು ಆರೋಪಿಗಳನ್ನು ಕುಪ್ಪೇಗಾಲ ಬಳಿಯ ಕಪಿಲ ನದಿಗೆ ಕರೆದೊಯ್ದು ಮಾಹಿತಿ ಪಡೆದುಕೊಂಡು ನದಿಯಿಂದ ಮೃತದೇಹವನ್ನು ಹೊರ ತೆಗೆಸಿ, ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಅಪರಾಧ ಪ್ರಕರಣ ಭೇದಿಸುವಲ್ಲಿ ಸಂತೆಮರಳ್ಳಿ ವೃತ್ತ ಆರಕ್ಷಕ ಬಸವರಾಜು, ಸಂತೆಮರಳ್ಳಿ ಠಾಣೆ ಇನ್ಸ್ ಪೆಕ್ಟರ್ ತಾಜುದ್ದೀನ್ ,ಸಿಬ್ಬಂದಿ ಸುರೇಶ್, ಕುದೇರು ಠಾಣೆಯ ಇನ್ಸ್ ಪೆಕ್ಟರ್ ಎಸ್. ಕುಮುದಾ.ಸಿಬ್ಬಂದಿಗಳಾದ ಶಂಕರ್, ನಾಗ ನಾಯಕ, ಉಮೇಶ್ ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಸ್ಥಳಕ್ಕೆ ಎಸ್ಪಿ ಕವಿತಾ ಅವರು ಭೇಟಿ ನೀಡಿ ಪರಿಶೀಲಿಸಿದರು.