ಮೈಸೂರು: ಪತ್ನಿಯ ಶೀಲ ಶಂಕಿಸಿ ಪಾಪಿ ಪತಿ ಮಚ್ಚಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿರುವ ಹೇಯ ಘಟನೆ ಜಿಲ್ಲೆಯ ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಪತಿ ದೇವರಾಜು ಪತ್ನಿ ತೇಜಸ್ವಿನಿ (26)ಯನ್ನು ಕೊಲೆ ಮಾಡಿದ್ದಾನೆ.
ಕಳೆದ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ತೋಟದ ಮನೆಯಲ್ಲಿ ವಾಸವಿದ್ದ ದಂಪತಿ ನಡುವೆ ಜಗಳವಾಗಿದೆ.ಸದಾ ಪತ್ನಿಯ ಮೇಲೆ ಅನುಮಾನದಿಂದ ನೋಡುತ್ತಿದ್ದ ಪತಿ ರಾತ್ರಿ ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.
ಘಟನೆ ನಡೆದ ಒಂದೇ ತಾಸಿನಲ್ಲಿ ಆರೋಪಿ ದೇವರಾಜು ನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳಕ್ಕೆ ಮೈಸೂರು ಜಿಲ್ಲಾ ಎಸ್ಪಿ ವಿಷ್ಣುವರ್ಧನ್, ಅಡಿಷಿನಲ್ ಎಸ್ಪಿ ಮಲ್ಲಿಕ್, ಡಿವೈಎಸ್ಪಿ ಗೋಪಾಲಕೃಷ್ಣ, ಸಿಪಿಐ ಶಬ್ಬೀರ್ ಹುಸೇನ್ ಭೇಟಿ ನೀಡಿ ನೀಡಿ ಪರಿಶೀಲಿಸಿದರು.