ಹುಣಸೂರು: ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರು ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗಲೆಂದು ಮಾಡಿದ್ದ ಮೈದಾನ ಈಗ ಖಾಸಗಿಯವರ ಪಾಲಾಗ ಹೊರಟಿದೆ.
ಹುಣಸೂರಿನ ಹೃದಯ ಭಾಗ, ನಗರಸಭೆ ಮುಂಭಾಗದಲ್ಲಿರುವ ಆಟದ ಮೈದಾನ ಈಗ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ.

ಈ ಮೈದಾನದಲ್ಲಿ ಮುಂಜಾನೆ ನಾಲ್ಕು-ಐದು ಗಂಟೆಯಿಂದಲೇ ಹಿರಿಯ ನಾಗರಿಕರು ಮಹಿಳೆಯರು ಆರೋಗ್ಯಕ್ಕಾಗಿ ವಾಕಿಂಗ್ ಮಾಡುತ್ತಾರೆ.

ಶಾಲಾ ಕಾಲೇಜು ಸಮಯದಲ್ಲಿ ವಿದ್ಯಾರ್ಥಿಗಳು ಇದೇ ಮೈನಾದಲ್ಲಿ ಆಟವಾಡುತ್ತಾರೆ, ಕೆಲವು ಶಾಲೆಯ ಮಕ್ಕಳಿಗೆ ಇಲ್ಲೇ ಡ್ರಿಲ್ ಮಾಡಿಸುವುದು, ಖೊಖೋ ಮತ್ತಿತರ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ಮೈದಾನಕ್ಕೆ ಹೊಂದಿಕೊಂಡಂತೆ ಚುರುಮುರಿ, ಗೋಬಿ, ಪಾನಿಪುರಿ, ಪೆಟ್ಟಿಗೆ ಅಂಗಡಿಗಳು ಕೂಡ ಇವೆ. ಇವುಗಳಿಂದ ನಗರ ಸಭೆಯವರು ಸುಂಕವನ್ನು ವಸೂಲಿ ಮಾಡುತ್ತಾರೆ, ಆದರೆ ಇವರಿಗೆ ಸರಿಯಾಗಿ ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ತಾಲೂಕು ಅಧ್ಯಕ್ಷ ಚೆಲುವರಾಜು ಆರೋಪಿಸಿದ್ದಾರೆ.

ಈ ಆಟದ ಮೈದಾನವನ್ನು ಇತ್ತೀಚೆಗೆ ನಗರಸಭೆಯವರು ರಾಜಸ್ಥಾನದ ಯಾವುದೊ ವ್ಯಕ್ತಿಗೆ ಮಳಿಗೆ ಹಾಕಲು ಅವಕಾಶ ಕೊಟ್ಟಿದ್ದಾರೆ. ಈಗಾಗಲೇ ಮಳಿಗೆಯನ್ನು ಸಿದ್ಧಪಡಿಸಲಾಗುತ್ತಿದೆ, ಇಂತಹ ಪ್ರಮುಖವಾದ ಮೈದಾನವನ್ನು ಖಾಸಗಿಯವರಿಗೆ ಕೊಟ್ಟು ಸಾರ್ವಜನಿಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಸಣ್ಣ ಪುಟ್ಟ ಅಂಗಡಿಗಳವರಿಂದ ಹಣಪೀಕಿಸುತ್ತಾರೆ ಇಲ್ಲಿಗೆ ನೂರಾರು ಮಂದಿ ತಿಂಡಿ ತಿನ್ನಲು ಬರುತ್ತಾರೆ, ಆದರೆ ಈ ಮೈದಾನವನ್ನು ಖಾಸಗಿಯವರಿಗೆ ಕೊಡುತ್ತಿದ್ದಾರೆ,ಖಾಸಗಿಯವರು ದೊಡ್ಡ ಮಳಿಗೆ ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ,ಜತೆಗೆ ಸಣ್ಣ ವ್ಯಾಪಾರಿಗಳ ಬಳಿ ಹೋಗುವ ಜನರನ್ನು ತಮ್ಮಕಡೆಗೆ ಸೆಳೆದುಕೊಳ್ಳುತ್ತಾರೆ.

ಇದರಿಂದ ಸ್ಥಳೀಯ ಸಣ್ಣಪುಟ್ಟ ವ್ಯಾರಾಗಳಿಗೆ ವ್ಯಾಪಾರ ಕಡಿಮೆಯಾಗುತ್ತದೆ.ಸಾಲಸೋಲ ಮಾಡಿ,ಗೋಬಿ,ಚುರುಮುರಿ,ಪಾನಿಪುರಿ,ಕಾಫಿ ಟೀ ಅಂಗಡಿ ಇಟ್ಟುಕೊಂಡಿರುತ್ತಾರೆ ಈ ಮೈದಾನದಲ್ಲಿ ಬರುವ ಖಾಸಗಿಯವರಿಂದ ಈ ಎಲ್ಲಾವ್ಯಾಪಾರಿಗಳ ವ್ಯಾಪಾರಕ್ಕೆ ಕಲ್ಲು ಬಿದ್ದಂತಾಗುತ್ತದೆ. ಇವರನ್ನು ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನಿಸಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.

ಇನ್ನು ಒಂದೆರಡು ತಿಂಗಳಲ್ಲಿ ವಸ್ತುಪ್ರದರ್ಶನಕ್ಕೂ ಅವಕಾಶ ಮಾಡಿಕೊಡುತ್ತಾರೆ.ಪ್ರತಿ ವರ್ಷ ಇದೇ ಕತೆ.
ಇದೆಲ್ಲದರಿಂದ ಮೈದಾನದ ಸುತಮುತ್ತಲಿನ ಮನೆಯವರಿಗೆ, ಶಾಲೆಗಳಿಗೆ,ಆಸ್ಪತ್ರಗಳಲ್ಲಿನ ರೋಗಿಗಳಿಗೆ ತೊಂದರೆಯಾಗುತ್ತದೆ
ಈ ಮೈದಾನವನ್ನು ಮಕ್ಕಳ ಆಟೋಟಕ್ಕೆ ಮತ್ತು ಮಹಿಳೆಯರ ವಾಕಿಂಗ್ ಗೆ ಬಿಟ್ಟು ಕೊಡಬೇಕು, ಇಲ್ಲಿ ಯಾವುದೇ ಕಾರಣಕ್ಕೂ ಖಾಸಗಿ ಅವರಿಗೆ ಪ್ರವೇಶ ಇರಕೂಡದು, ಅಂಗಡಿ ಮಳಿಗೆಗಳು ತೆರೆಯಕೂಡದು ಒಂದುವೇಳೆ ತೆರೆದರೆ ಹೋರಾಟ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಚಲುವರಾಜು ಎಚ್ಚರಿಸಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳಿಗೆ ಇದು ಕಣ್ಣಿಗೆ ಕಾಣುತ್ತಿಲ್ಲವೇ ಅಥವಾ ಕಂಡರೂ ಜಾಣಕುರುಡರಂತೆ ವರ್ತಿಸುತ್ತಿದ್ದಾರೆಯೊ ತಿಳಿಯದು.ಕೂಡಲೇ ಎಚ್ಚೆತ್ತುಕೊಂಡು ಮೈದಾನವನ್ನು ಮೈದಾನವಾಗಿ ಇರಲು ಬಿಡಬೇಕೆಂದು ಚಲುವರಾಜು ಆಗ್ರಹಿಸಿದ್ದಾರೆ.