ಮೊರಾರ್ಜಿ ದೇಸಾಯಿ ವಸತಿ ಶಾಲೆ: ನೀರಿನ ತೊಟ್ಟಿ ಶುಚಿಯಿಲ್ಲದೆ ಮಕ್ಕಳಿಗೆ ಚರ್ಮವ್ಯಾಧಿ

ಹುಣಸೂರು: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೀರಿನ ತೊಟ್ಟಿ ಶುಚಿಗೊಳಿಸದೆ ಮಕ್ಕಳಿಗೆ ಚರ್ಮ ವ್ಯಾಧಿ ಬಂದಿದೆ ಎಂದು ಕರ್ನಾಟಕ ‌ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆರೋಪಿಸಿದ್ದಾರೆ.

ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿ, ಧರ್ಮಾಪುರ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಂತಹ ಪ್ರಕರಣ ನಡೆದಿದೆ.

ಈ ವಸತಿ ಶಾಲೆಯಲ್ಲಿರುವ ಹಲವು ಮಕ್ಕಳು ಅನಾರೋಗ್ಯಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ‌ ಬಗ್ಗೆ ಕರ್ನಾಟಕ ‌ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು‌ ಅವರಿಗೆ ಮಕ್ಕಳ, ಪೋಷಕರು ನೀಡಿದ ದೂರಿದ್ದು,ಅವರು ವಸತಿ ಶಾಲೆಗೆ ಖುದ್ದು ಭೇಟಿ ನೀಡಿ ವಸತಿ ಶಾಲೆಯ ಪರಿಸರವನ್ನು ಗಮನಿಸಿದ್ದಾಗಿ‌ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.

ನೀರಿನ ತೊಟ್ಟಿಯನ್ನು ಬಹಳ ಕಾಲದಿಂದ ಶುಚಿಗೊಳಿಸದೇ ಇರುವುದು ಕಂಡು ಬಂದಿದೆ.

ಇದರಲ್ಲಿರುವ ನೀರನ್ನು ಬಳಸುತ್ತಿರುವ ಮಕ್ಕಳಿಗೆ ಏಕಕಾಲದಲ್ಲಿ ಚರ್ಮವ್ಯಾದಿಯು ಕಂಡು ಬಂದಿದೆ. ಹಾಗಾಗಿ ಮಕ್ಕಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಇದು ವಸತಿ ಶಾಲೆಯ ಬೇಜವಾಬ್ದಾರಿ ರೀತಿಯನ್ನು ಎತ್ತಿ ತೋರುತ್ತದೆ,ಇದನ್ನು ನಮ್ಮ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಈ ಕೂಡಲೇ ವಸತಿ ಶಾಲೆಯ ನೀರಿನ ತೊಟ್ಟಿಯನ್ನು ಶುಚಿಗೊಳಿಸಿ ಮಕ್ಕಳ ಆರೋಗ್ಯವನ್ನು ಕಾಪಾಡಬೇಕೆಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಡನ್ ಅವರನ್ನು ಚೆಲುವರಾಜು ಆಗ್ರಹಿಸಿದ್ದಾರೆ.

ಸರಿಪಡಿಸದೆ ಹೋದರೆ ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.