ಬಗೆ ಹರಿಯದ ಹುಣಸೂರು ಸಿದ್ದನಕೊಪ್ಪಲು ಚರಂಡಿ ಅವ್ಯವಸ್ಥೆ:ಸರಿಯಾಗುವುದೆ

Spread the love

ಹುಣಸೂರು: ಹುಣಸೂರು ಸಿದ್ದನಕೊಪ್ಪಲು,ರಾಮಪಟ್ಟಣ ರಸ್ತೆ ಸರ್ವೆ ನಂ.164/3 ರಲ್ಲಿ ಮನೆಗಳ ಬಳಿ ಚರಂಡಿ ಅವ್ಯವಸ್ಥೆ ಹೇಳತೀರದಾಗಿದೆ.

ಇಲ್ಲಿ ನಾಲ್ಕೈದು ಮನೆಗಳಿದ್ದು,ಮನೆಗಳಿಗೆ ಹೊಂದಿಕೊಂಡಂತೆ ಚರಂಡಿ ನಿರ್ಮಿಸಲಾಗಿದೆ.ಆದರೆ ಚರಂಡಿ ಅಪೂರ್ಣವಾಗಿದೆ.ಸತತ ಮಳೆಯಿಂದಾಗಿ ಚರಂಡಿಯಲ್ಲಿ ನೀರು ನಿಂತು ರಾಡಿಯಾಗಿದೆ.

ಈ‌ ಬಗ್ಗೆ ಬೀಜಗನಹಳ್ಳಿ ಗ್ರಾಮ ಪಂಚಾಯಿತಿ ಪಿ ಡಿ ಒ ಅವರಿಗೆ ತಿಳಿಸಿದ್ದೆವು. ಆದರು ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಇದೇ ಸರ್ವೆ ನಂಬರ್ ನಲ್ಲಿ ವಾಸವಿರುವ ಸುವರ್ಣ ಎಂ ಎಂಬುವರು ಸೇರಿದಂತೆ ಹಲವರು ಆರಪಿಸಿದ್ದಾರೆ.

ಪಕ್ಕದ ಜಮೀನಿನ ಮೂಲಕ ಚರಂಡಿ ಹಾದು ಹೋಗಿದೆ,ಆದರೆ ಆ ಜಮೀನಿನ ಮಾಲೀಕರು ಚರಂಡಿ ಪೂರ್ಣಗೊಳ್ಳಲು ಅನುವು ಮಾಡಿ ಕೊಟ್ಟಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಚರಂಡಿ ಪೂರ್ಣಗೊಳ್ಳಲು ಅನುವು ಮಾಡಿಕೊಡದ ಕಾರಣ ನೀರು ತುಂಬಿ ಸೊಳ್ಳೆಗಳ ಕಾಟ ವಿಪರೀತವಾಗಿದೆ ಡೆಂಗಿ ರೋಗದಿಂದ ಬಳಲುವಂತಾಗಿದೆ ಎಂದು ಸುವರ್ಣ ಅವರು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಜತೆ ಅಳಲು ತೋಡಿಕೊಂಡಿದ್ದಾರೆ.

ಕೂಡಲೇ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಚರಂಡಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಅಥವಾ ಚರಂಡಿಯ ನೀರು ಸಮೀಪದಲ್ಲೇ ಇರುವ ಡ್ರೈನೇಜ್ಗೆ ಹೋಗುವಂತೆ ಮಾಡಬೇಕೆಂದು ಸುವರ್ಣ ಅವರು ಒತ್ತಾಯಿಸಿದ್ದಾರೆ.

ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ ನಾವು ತಾಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೂ ತರುತ್ತೇವೆ ಎಂದು ಎಚ್ಚರಿಸಿದ್ದಾರೆ.

ಚರಂಡಿ ಕೊಳೆತು ಗಬ್ಬು ನಾರುತ್ತಿರುವ ಬಗ್ಗೆ ಸುವರ್ಣ ಅವರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿ ಅವರಿಗೂ ಪತ್ರ ಬರೆದಿದ್ದಾರೆ.

ಇದಕ್ಕೂ ಮೊದಲು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು ಕೂಡ ಇಲ್ಲಿನ ಡ್ರೈನೇಜ್ ಬಗ್ಗೆ ಗಮನ ಸೆಳೆದಿದ್ದರು ಅವರು ಕೂಡ ಸುವರ್ಣ ಅವರ ಹೋರಾಟಕ್ಕೆ ಸಾತ್ ನೀಡಲಿದ್ದಾರೆ.