ಹುಣಸೂರು: ಹಿಂದುಳಿದವರ ನಾಯಕ ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರ ತವರು ತಾಲೂಕು ಹುಣಸೂರು ಪಟ್ಟಣದಲ್ಲಿ ಮಹಾನ್ ಮಾನವತಾವಾದಿ,
ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೆ ಜಯಂತಿಯನ್ನು ಹಮ್ಮಿಕೊಳ್ಳಲಾಯಿತು.
ಬೆಳಿಗ್ಗೆ ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಪಟ್ಟಣದ ಸಾಯಿಬಾಬಾ ದೇವಸ್ಥಾನದ ಬಳಿಯಿಂದ ನಗರಸಭೆ ಮೈದಾನದವರೆಗೆ ಅದ್ದೂರಿ ಮೆರವಣಿಗೆ ನಡೆಯಿತು.ನಂತರ ಇದೇ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಮತ್ತು ಸ್ವಾಭಿಮಾನಿ ಸಮಾವೇಶ ಕೂಡಾ ಯಶಸ್ವಿಯಾಗಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಸಚಿವರುಗಳಾದ ಡಾ.ಹೆಚ್.ಸಿ.ಮಹದೇವಪ್ಪ,ಪ್ರಿಯಾಂಕ್ ಖರ್ಗೆ ಸೇರಿದಂತೆ ಆಹ್ವಾನ ಪತ್ರಿಕೆ ಯಲ್ಲಿದ್ದವರೆಲ್ಲ ಆಗಮಿಸಿದ್ದರು.ಆದರೆ ಸ್ಥಳೀಯ ಶಾಸಕರಾದ ಜಿ.ಡಿ ಹರೀಶ್ ಗೌಡ
ಮಾತ್ರ ಆಗಮಿಸಲಿಲ್ಲ.

ಇದರಿಂದ ಪಟ್ಟಣದ ನಾಗರಿಕರು ಬೇಸರಗೊಂಡಿದ್ದಾರೆ.
ಸ್ಥಳೀಯ ಶಾಸಕ ಜಿ.ಡಿ ಹರೀಶ್ ಗೌಡ ಅವರು ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಕಾರಣ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ತಾಲೂಕು ಅಧ್ಯಕ್ಷ ಚೆಲುವರಾಜು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದವರೆಲ್ಲರೂ ಬಂದಿದ್ದಾರೆ, ಮೈಸೂರು ಕೊಡಗು ಸಂಸದರಾದ ಯದುವೀರ್ ಒಡೆಯರ್ ಕಾರಣಾಂತರಗಳಿಂದ ಬಂದಿಲ್ಲ, ಆದರೆ ಜಿ ಡಿ ಹರೀಶ್ ಗೌಡ ಅವರು ಸ್ಥಳೀಯ ಶಾಸಕರು. ಅವರು ಪಾಲ್ಗೊಳ್ಳಲೇಬೇಕಿತ್ತು ಆದರೆ ಅವರು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅವರು ಎಲ್ಲೇ ಹೋಗಿರಲಿ, ಏನೇ ಆಗಿರಲಿ ಅವರು ಸ್ಥಳೀಯ ಶಾಸಕರು. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದಿದ್ದು ಅವರ ಜವಾಬ್ದಾರಿ. ಅವರು ಬರದೆ ಇರಲು ಏನು ಕಾರಣ ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.
ಇವರಿಗೆ ಹುಣಸೂರು ಜನಗಳ ಮತ ಬೇಕು, ಎಸ್ ಸಿ,ಎಸ್ ಟಿ ಜನರ ಮತ ಬೇಕು ಆದರೆ ಎಸ್ ಸಿ ಜನ ಹಮ್ಮಿಕೊಳ್ಳುವ ಕಾರ್ಯಕ್ರಮ ಬೇಡವೆ ಎಂದು ಚಲುವರಾಜ್ ಪ್ರಶ್ನಿಸಿದರು.
ಮಾಜಿ ಶಾಸಕರೂ, ಹಿರಿಯರು ಆದ ಎಚ್ ವಿಶ್ವನಾಥ್ ಅಂತವರೇ ಪಾಲ್ಗೊಂಡಿದ್ದಾರೆ. ಆದರೆ ಜಿ.ಡಿ.ಹರೀಶ್ ಗೌಡರು ಸ್ಥಳೀಯರು, ಹಾಲಿ ಶಾಸಕರು.ಹಾಗಾಗಿ ಭಾಗವಹಿಸಬೇಕಾದುದು ಅವರ ಕರ್ತವ್ಯ. ಆದರೆ ಅವರು ಪಾಲ್ಗೊಂಡಿಲ್ಲ. ಇವರು ಸಂವಿಧಾನ ವಿರೋಧಿಯೇ ಅಥವಾ ಎಸ್ ಸಿ, ಎಸ್ ಟಿ ಜನಾಂಗದ ವಿರೋಧಿಯೆ ತಿಳಿಸಲಿ ಎಂದು ಆಗ್ರಹಿಸಿದರು.

ಅವರು ಬರದೇ ಹೋಗಿರುವುದು ನಮಗೆ ಬಹಳ ನೋವಾಗಿದೆ ಅವರು ಹುಣಸೂರಿನ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಚೆಲುವರಾಜ ಬೇಸರದಲ್ಲೇ ಹೇಳಿದ್ದಾರೆ.