ಹುಣಸೂರು: ಹುಣಸೂರು ತಾಲೂಕು,ಉದ್ದೂರು ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕುಪ್ಪೆ ಗ್ರಾಮದಲ್ಲಿ ಸುಮಾರು 800 ಮಂದಿ ವಾಸಿಸುತ್ತಿದ್ದು ಸರಿಯಾಗಿ ಕುಡಿಯುವ ನೀರು ಬರದೆ ಬಹಳ ತೊಂದರೆ ಅನುಭವಿಸು ತ್ತಿದ್ದಾರೆ.
ಹೊನ್ನಿಕುಪ್ಪೆ ಗ್ರಾಮದಲ್ಲಿ ಪ್ರತಿ ಮನೆಗಳ ಮುಂದೆಯೂ ಕೊಳಾಯಿಗಳಿವೆ, ಆದರೆ ಹೆಸರಿಗೆ ಮಾತ್ರ ಈ ಕೊಳಾಯಿಗಳು ಇವೆ. ಇಲ್ಲಿ ನೀರು ಕೊಡುವ ನೀರು ಗಂಟಿ ತನಗೆ ಇಷ್ಟ ಬಂದಾಗ ನೀರು ಬಿಡುತ್ತಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಸ್ವತಃ ಹೊನ್ನಿಕುಪ್ಪೆ ಗ್ರಮಾದವರೇ ಆದ ಚಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ನಾಲ್ಕು ದಿನಗಳಿಗೆ ಒಮ್ಮೆ ನೀರು ಬಿಡುತ್ತಾರೆ ಬಿಟ್ಟರೂ ಅರ್ಧ ಗಂಟೆ ಮಾತ್ರ ಬಿಡುತ್ತಾರೆ.ತಗ್ಗು ಪ್ರದೇಶದ ಮನೆಗಳಿಗೆ ನೀರು ಹರಿದು ಹೋಗುತ್ತದೆ, ಎತ್ತರದಲ್ಲಿರುವ ಪ್ರದೇಶದ ಮನೆಗಳಿಗೆ ನೀರು ಬರುವುದೇ ಇಲ್ಲ, ಇದರಿಂದ ಬಹಳಷ್ಟು ಮನೆಗಳವರು ಪ್ರತಿದಿನ ನೀರಿಗಾಗಿ ತೊಂದರೆ ಪಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಈಗ ಮಳೆಗಾಲ ಎಲ್ಲಾ ನದಿ ಕೆರೆ ಹಳ್ಳ ಕೊಳಗಳು ತುಂಬಿದೆ ಮೊದಲು ಬೋರ್ ವೆಲ್ ನಿಂದ ಗ್ರಾಮದಲ್ಲಿರುವ ಓವರ್ ಹೆಡ್ ಟ್ಯಾಂಕಿಗೆ ನೀರು ತುಂಬಿಸಬೇಕು ನಂತರ ನಲ್ಲಿಗಳ ಮೂಲಕ ನೀರು ಬಿಡಬೇಕು,ಆದರೆ ಡೈರೆಕ್ಟಾಗಿ ಬೋರ್ವೆಲ್ನಿಂದಲೇ ನೀರು ಬಿಡುತ್ತಾರೆ,ಓವರ್ ಹೆಡ್ ಟ್ಯಾಂಕ್ ಖಾಲಿ ಇರುತ್ತದೆ ಎಂದು ಚಲುವರಾಜು ಹೇಳಿದ್ದಾರೆ.
ಗ್ರಾಮದಲ್ಲಿ ಇರುವ ಓವರ್ ಹೆಡ್ ಟ್ಯಾಂಕನ್ನು ಸ್ವಚ್ಛಪಡಿಸಿ ಎಷ್ಟು ದಿನಗಳಾಯಿತೊ ತಿಳಿಯದು,ಕನಿಷ್ಟ ಮೂರು ತಿಂಗಳಿಗಾದರೂ ಸ್ವಚ್ಛಮಾಡಬೇಕು,ಅದಕ್ಕಾಗಿ ಹಣ ಕೂಡಾ ಕೊಡಲಾಗುತ್ತದೆ ಇದೆಲ್ಲಾ ನೀರಲ್ಲಿ ಹೋಮ ಆಗುತ್ತದೆ.
ನೀರು ಬಿಡುವವರು 300ರೂ 500 ರೂ ಹಣ ಕೊಟ್ಟರೆ ಮಧ್ಯರಾತ್ರಿಯಲ್ಲೂ ನೀರು ಬಿಡುತ್ತಾರೆ,ಆ ನೀರು ಮಧ್ಯರಾತ್ರಿಯಿಂದ ಬೆಳಗಿನವರೆಗೂ ನೀರು ಹರಿದು ವೇಸ್ಟಾಗುತ್ತಿದೆ,ಅದನ್ನೆಲ್ಲ ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಚಲುವರಾಜು ಆರೋಪಿಸಿದ್ದಾರೆ.
ಒಂದು ಕಡೆ ಗ್ರಾಮದ ಜನರಿಗೆ ನೀರು ಬಿಡದೆ ಸತಾಯಿಸುತ್ತಾರೆ,ಇನ್ನೊಂದು ಕಡೆ ಹೀಗೆ ಸಮ್ಮನೆ ನೀರು ಪೋಲು ಮಾಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಹೊನ್ನಿಕುಪ್ಪೆ ಗ್ರಾಮದ ಜನರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು,ಎಲ್ಲಾ ಮನೆಗಳಿಗೂ ಸರಿಯಾಗಿ ನೀರು ಕೊಡಬೇಕು ಎಂದು ಚಲುವರಾಜು ಆಗ್ರಹಿಸಿದ್ದಾರೆ.