ಹುಣಸೂರು: ಸಾಲಬಾಧೆಯಿಂದ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರಿನ ಚಿಕ್ಕಹೆಜ್ಜೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕಹೇಜ್ಜೂರು ಗ್ರಾಮದ ಮಹದೇವಪ್ಪ(69) ಆತ್ಮಹತ್ಯೆ ಮಾಡಿಕೊಂಡ ರೈತ.
ಆತ ಬೆಳೆ ಬೆಳೆಯಲು ದೊಡ್ಡಹೆಜ್ಜೂರು ಸೊಸೈಟಿ ಹಾಗೂ ವಿವಿಧೆಡೆ ಸಾಲ ಕೂಡ ಮಾಡಿಕೊಂಡಿದ್ದರು ಎನ್ನಲಾಗಿದೆ.
ಟ್ರಾಕ್ಟರ್‌ನ್ನೂ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ತೆಗೆದುಕೊಂಡು ಟ್ರಾಕ್ಟರ್ ಖರೀದಿಸಿದ್ದರು. ಸಾಲ ತೀರಿಸದ ಕಾರಣ ಫೈನಾನ್ಸ್‌ನವರು ನೋಟಿಸ್ ನೀಡಿದ್ದರು.
ಬೆಳೆಗಳು ಅತಿವೃಷ್ಟಿಯಿಂದಾಗಿ ನಾಶವಾಗಿ ಫಸಲು ಕೈ ಸೇರಿಲ್ಲ, ಮಾಡಿದ್ದ ಸಾಲವನ್ನು ಹೇಗೆ ತೀರಿಸುವುದು ಎಂದು ಮನನೊಂದು ಮಹದೇವಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.