ಹುಣಸೂರು: ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ಸರ್ಕಾರ ಪಟ್ಟಣಗಳಲ್ಲಿ ಮಹಿಳಾ ಕಾಲೇಜುಗಳನ್ನು ನಿರ್ಮಿಸಿದೆ, ಇದು ಸ್ವಾಗತಾ ರ್ಹ. ಆದರೆ ಅಧ್ಯಾಪಕರೇ ಇಲ್ಲದಿದ್ದರೆ ಅವರು ವಿದ್ಯಾಭ್ಯಾಸ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.
ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸುಮಾರು 1250 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.
ಇದೇನೋ ಅತ್ಯಂತ ಸಂತೋಷದ ವಿಷಯವೇ, ಆದರೆ ವಿದ್ಯಾರ್ಥಿನಿಯರಿಗೆ ತಕ್ಕಂತೆ ಅಧ್ಯಾಪಕರ ಕೊರತೆ ಎದ್ದು ಕಾಣುತ್ತಿದೆ.ಅದೇ ಬೇಸರದ ಸಂಗತಿ.
30 ಅತಿಥಿ ಉಪನ್ಯಾಸಕರು ಮತ್ತು ಕಾಯಂ ಅಧ್ಯಾಪಕರ ಅಗತ್ಯವಿದೆ ಎಂದು ವಿದ್ಯಾರ್ಥಿನಿಯರು ಅಲವತ್ತುಕೊಂಡಿದ್ದಾರೆ.
ಬಿಸಿಎ ವಿಭಾಗಕ್ಕೆ ಮೂರು ಕಾಯಂ ಆಧ್ಯಾಪಕರು, ಇಂಗ್ಲೀಷ್ ವಿಭಾಗಕ್ಕೆ ಹೆಚ್ಚುರಿಯಾಗಿ ಎರಡು ಅಧ್ಯಾಪಕರ ಅಗತ್ಯವಿದೆ. ಅದೇ ರೀತಿ ಇತಿಹಾಸ ವಿಭಾಗದಲ್ಲಿ ಎರಡು ಅಧ್ಯಾಪಕರ ಅಗತ್ಯವಿದೆ ಎಂದು ವಿದ್ಯಾರ್ಥಿನಿಯರು ಹಾಗೂ ಸ್ವತಃ ಉಪನ್ಯಾಸಕರು ಮನವಿ ಮಾಡಿದ್ದಾರೆ.
ಹಾಗೆಯೇ ಬೋಧಕೇತರ ಸಿಬ್ಬಂದಿ ಅಗತ್ಯವೂ ಇದೆ. ಕಚೇರಿಗೆ ಸೂಪರಿಂಟೆಂಡೆಂಟ್ ಬೇಕಾಗಿದ್ದಾರೆ, ಅಲ್ಲದೆ ಸೆಕ್ಯೂರಿಟಿ ಕಾರ್ಡ್ ಮತ್ತು ಸಹಾಯಕರುಗಳ ಅಗತ್ಯವೂ ಇದೆ ಎಂದು ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ.
ಇಂತಹ ದೊಡ್ಡ ಕಾಲೇಜಿಗೆ ಇಷ್ಟು ಅಧ್ಯಾಪಕರು ಅಧ್ಯಾಪಕೇತರ ಸಿಬ್ಬಂದಿ ಕೊರತೆ ಇದ್ದು ಸಂಬಂಧ ಪಟ್ಟ ಅಧಿಕಾರಿಗಳು ವಿದ್ಯಾರ್ಥಿನಿಯರ ಮನವಿಗೆ ಸ್ಪಂದಿಸಬೇಕಿದೆ.ಕೂಡಲೇ ಶಿಕ್ಷಣ ಸಚಿವರು ಇತ್ತ ಗಮನ ಹರಿಸಿ ಉಪನ್ಯಾಸಕರ ಕೊರತೆ ನೀಗಿಸಬೇಕು.
ಪರೀಕ್ಷೆಗಳು ಹತ್ತಿರದಲ್ಲೇ ಇದೆ, ವಿದ್ಯಾರ್ಥಿನಿಯರಿಗೆ ಯಾವುದೇ ವಿಷಯದಲ್ಲೂ ತೊಂದರೆಯಾಗದಂತೆ ಆಯಾ ವುಭಾಗದ ಅಧ್ಯಾಪಕರುಗಳನ್ನು ಕೂಡಲೇ ನೇಮಿಸಲಿ.
ಜತೆಗೆ ಇಂತಹ ದೊಡ್ಡ ಕಾಲೇಜಿನ ವಿದ್ಯಾರ್ಥಿಗಳಿಗೆ ಆಟೋಟಗಳಿಗೆ ಆಟದ ಮೈದಾನವೇ ಇಲ್ಲ.ಇದೂ ಕೂಡಾ ಬೇಸರದ ಸಂಗತಿ.
ನಗರಸಭೆ ಮೈದಾನದಲ್ಲಿ ಆಟ ಆಡಬಹುದು.ಆದರೆ ಈ ಮೈದಾನವನ್ನು ಯಾವುದೋ ಮಾಲ್ ಗಳಿಗೆ ಕೊಟ್ಟುಬಿಟ್ಟಿದ್ದಾರೆ.ಹಾಗಾಗಿ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳಿಗೆ ಜಾಗವಿಲ್ಲದಂತಾಗಿದೆ.
ಒಂದು ವೇಳೆ ಸರ್ಕಾರಿ ಮಹಿಳಾ ಕಾಲೇಜಿಗೆ ಉಪನ್ಯಾಸಕರನ್ನು ಶೀಘ್ರವೇ ನೇಮಿಸದಿದ್ದರೆ ಕರ್ನಾಟಕ ಪ್ರಜಾ ಪಾರ್ಟಿ ಹುಣಸೂರು ತಾಲೂಕು ವತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
