ಹುಣಸೂರು: ಹುಣಸೂರು ತಾಲೂಕಿನಲ್ಲಿ ರೈತರು ಮತ್ತು ಬಡಜನರೊಂದಿಗೆ ಜನಪ್ರತಿನಿಧಿಗಳು ಮತ್ತು ವಿದ್ಯುತ್ ಇಲಾಖೆಯವರು ಕಣ್ಣಾಮುಚ್ಚಾಲೆ ಆಡುತ್ತಾ
ಸುಮ್ಮನೆ ಅಲೆದಾಡಿಸುತ್ತಾರೆ.
ಹುಣಸೂರಿನಲ್ಲಿ ಬಡವರಿಗೊಂದು ನ್ಯಾಯ ಬಲಾಢ್ಯರಿಗೊಂದು ನ್ಯಾಯ ಎಂಬಂತೆ ಆಗಿಬಿಟ್ಟಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಕಿಡಿಕಾರಿದ್ದಾರೆ.
ಹುಣಸೂರಿನಲ್ಲಿ ಮೋರ್ ಸೂಪರ್ ಮಾರ್ಕೆಟ್ ಗೆ ಯಾವುದೇ ದಾಖಲೆಗಳಿಲ್ಲದೆ ಕರೆಂಟ್ ಕೊಟ್ಟಿದ್ದಾರೆ.ಆದರೆ ರೈತರು, ಬಡ ಜನರು ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಿ ಎಂದು ಕೇಳಿದರೆ ಎನ್ ಒ ಸಿ ತೆಗೆದುಕೊಂಡು ಬನ್ನಿ ಕಟ್ಟಡದ ಪ್ಲಾನ್, ಲೈಸನ್ಸ್ ತೆಗೆದುಕೊಂಡು ಬನ್ನಿ ಎಂದು ಸುಮ್ಮನೆ ಅಲೆದಾಡಿಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ.
ನಗರಸಭೆ ಸದಸ್ಯರು ಮೋರ್ ಸೂಪರ್ ಮಾರ್ಕೆಟ್ ನೊಂದಿಗೆ ಶಾಮೀಲಾಗಿದ್ದಾರೆ, ಅಧಿಕಾರಿಗಳನ್ನು ದುರುಪಯೋಗ
ಪಡಿಸಿಕೊಳ್ಳುತ್ತಿದ್ದಾರೆ, ಆದರೆ ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡಲು ಇಚ್ಛಿಸುತ್ತಾರೆ.ಇಲ್ಲಿ ಮೋರ್ ಸೂಪರ್ ಮಾರ್ಕೆಟ್ ಓಪನ್ ಮಾಡಿರುವುದೇ ಸರಿ ಇಲ್ಲ.ಸರ್ಕಾರದ ಜಾಗ ದುರುಪಯೋಗ ಆಗುತ್ತಿದೆ.ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ ನಷ್ಟವಾಗುತ್ತಿದೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ಮೋರ್ ಸೂಪರ್ ಮಾರ್ಕೆಟ್ ಗೆ ನಗರಸಭೆಯವರು ಯಾವುದೇ ದಾಖಲೆ ಕೇಳದೆ ಜಾಗ ಕೊಟ್ಟಿದ್ದಾರೆ ಎಂದು ದೂರಿದ್ದಾರೆ.
ಮೋರ್ ಸೂಪರ್ ಮಾರ್ಕೆಟ್ ನವರು
ಅನಧಿಕೃತವಾಗಿ ವಿದ್ಯುತ್ ಲೈನ್ ಗಳನ್ನು ಎಳೆದುಕೊಂಡು ಕರೆಂಟ್ ಹರಿಸಿಕೊಳ್ಳುತ್ತಾರೆ,ಅನಧಿಕೃತವಾಗಿ ಮಳಿಗೆ ಪ್ರಾರಂಭಿಸಿದ್ದಾರೆ, ಇದನ್ನೆಲ್ಲ ಕೇಳಲು ಹೋದರೆ ಗೂಂಡಾಗಳನ್ನು ಬಿಟ್ಟು ಧಮ್ಕಿ ಹಾಕಿಸುತ್ತಾರೆ ಎಂದು ಚೆಲುವರಾಜು ದೋರಿದ್ದಾರೆ.
ಹುಣಸೂರು ತಾಲೂಕು ಹನಗೋಡು ಹೋಬಳಿ ದೊಡ್ಡ ಹೆಜ್ಜೂರಿನಲ್ಲಿ ರೈತರು ಒಂದು ತಿಂಗಳು ಕರೆಂಟ್ ಬಿಲ್ ಕಟ್ಟಿಲ್ಲವೆಂದು ಕೆಲವರ ಪಂಪ್ ಸೆಟ್ ಗಳ ಕರೆಂಟ್ ಕಿತ್ತು ಹೋಗಿದ್ದಾರೆ. ರೈತರಿಗೆ ಒಂದು ನ್ಯಾಯ ಸೂಪರ್ ಮಾರ್ಕೆಟ್ ನವರಿಗೆ ನ್ಯಾಯವೆ ಇದನ್ನೆಲ್ಲಾ ಕೇಳುವವರೇ ಇಲ್ಲದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಬೆಳೆ ಬೆಳೆಯದಿದ್ದರೆ ನಮಗೆ ಒಂದು ಹೊತ್ತು ಊಟಕ್ಕೂ ಗತಿ ಇರುವುದಿಲ್ಲ ರೈತರು ದೇಶದ ಬೆನ್ನೆಲುಬು. ಅಂತಹುದರಲ್ಲಿ ರೈತರಿಗೆ ಹುಣಸೂರಿನಲ್ಲಿ ಅನ್ಯಾಯ ಆಗುತ್ತಿದೆ. ದುಡ್ಡಿರುವವರ ಪರ ಕೆಲಸ ಮಾಡಲಾಗುತ್ತಿದೆ.
ಕೂಡಲೇ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರು,ಶಾಸಕರು ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಚಲುವರಾಜು ಎಚ್ಚರಿಸಿದ್ದಾರೆ.
ವಿದ್ಯುತ್ ಇಲಾಖೆಯವರು ಮತ್ತು ನಗರಸಭೆ ಅಧಿಕಾರಿಗಳಿಗೆ ರೈತರ ಪರ ಕೆಲಸ ಮಾಡುವಂತೆ ತಾಕೀತು ಮಾಡಲಿ.ರೈತರಿಗೆ ನ್ಯಾಯ ಕೊಡಲಿ ಎಂದು ಚಲುವರಾಜು ಒತ್ತಾಯಿಸಿದ್ದಾರೆ.