ಲಯನ್ಸ್ ಕ್ಲಬ್ ನಿಂದ ಯಶಸ್ವಿ ಹಂಗರ್ ಫೀಡ್ ಕಾರ್ಯಕ್ರಮ

Spread the love

ಮೈಸೂರು: ರೆಲಿಷ್ ಲಿಯೋ ಲಯನ್ಸ್ ಕ್ಲಬ್, ಎಲ್‌ಸಿಎಂ ಕ್ರೌನ್, ಎಲ್‌ಸಿಎಂ ವಿವಿ ಸಿಇ ಕ್ಯಾಂಪಸ್ ಮತ್ತು ಮೈಸೂರು ಕ್ಲಾಸಿಕ್ ಲಿಯೋ ಕ್ಲಬ್‌ಗಳ ಸಹಯೋಗದಲ್ಲಿ ಹಂಗರ್ ಫೀಡ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಈ ರೀತಿಯ ಕಾರ್ಯಕ್ರಮಗಳು ಲಯನ್ಸ್ ಕ್ಲಬ್‌ನ ಸಮಾಜ ಸೇವೆ ಮತ್ತು ಮಾನವೀಯತೆಗಾಗಿ ನೀಡುವ ಬದ್ಧತೆಯನ್ನು ತೋರುತ್ತದೆ.

ಈ ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಲಯನ್. ಅರುಣ್ ಮಂಡಲ್ ಹಾಗೂ ಶಾಂತಿ ಪೋಸ್ಟರ್ ಜಿಲ್ಲಾ ಅಧ್ಯಕ್ಷ ಲಯನ್. ದಿನೇಶ್ ಸಿ.ಆರ್. ಅವರು ಉಪಸ್ಥಿತರಿದ್ದರು.

ಜಿಲ್ಲಾ ಲಿಯೋ ಅಧ್ಯಕ್ಷ ಲಿಯೋ ಆರ್ಯವ್ ಮಾನಿಕ್ಯ ಮಂಡಲ್, ಜಿಲ್ಲಾ ಲಿಯೋ ಕಾರ್ಯದರ್ಶಿ ಲಿಯೋ ಕೀರ್ತಿ ಕುಮಾರ್, ಎಲ್‌ಸಿಎಂ ರೆಲಿಷ್ ಅಧ್ಯಕ್ಷೆ ಲಯನ್. ಸಿಂಥಿಯಾ ಡಿ’ಮೆಲ್ಲೋ, ಎಲ್‌ಸಿಎಂ ವಿವಿ ಸಿಇ ಕ್ಯಾಂಪಸ್ ಅಧ್ಯಕ್ಷೆ ಲಯನ್. ಕೀರ್ತನಾ ಎ.ಎಸ್., ಎಲ್‌ಸಿಎಂ ಕ್ರೌನ್ ಅಧ್ಯಕ್ಷ ಲಯನ್. ಇಮಾದ್ ಮತ್ತು ಖಜಾಂಚಿ ಲಯನ್. ಮಂದಾರ ಅವರು ಕಾರ್ಯಕ್ರಮದ ನೇತೃತ್ವ ನೀಡಿದರು.

ಇವತ್ತಿನ ಹಂಗರ್ ಫೀಡ್ ಡ್ರೈವ್‌ ಅನ್ನು ದರ್ಶಿನಿ ಅವರು ಪ್ರಾಯೋಜಿಸಿದರು. ಸಕ್ರಿಯವಾಗಿ ಪಾಲ್ಗೊಂಡ ಸದಸ್ಯರಲ್ಲಿ ಲಯನ್. ಆಲೆನ್ ಸ್ಟೀಫನ್, ಲಯನ್. ರಿಷಬ್, ಲಯನ್. ಅನಘಾ ಆಚಾರ್ಯ, ಲಯನ್. ಬೆಣಕ ಕೆ., ಲಯನ್. ಜೀವನ್ ವಿ. ಮತ್ತು ಲಯನ್. ತನ್ಮಯಿ ಎಸ್. ಹಾಜರಿದ್ದರು.