ಹುಬ್ಬಳ್ಳಿ: ಜಾನಪದ ಮುರಿದು ಕಟ್ಟಬೇಕಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷರು ಹಾಗೂ ಭಾರತ ಸರ್ಕಾರದ ಐ ಸಿ ಸಿ ಆರ್ ಸದಸ್ಯರೂ ಆದ ಡಾ.ಜಾನಪದ ಎಸ್ ಬಾಲಾಜಿ ಅಭಿಪ್ರಾಯ ಪಟ್ಟರು.
ಹುಬ್ಬಳ್ಳಿ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಹುಬ್ಬಳ್ಳಿ ನಗರ ತಾಲ್ಲೂಕಿನ 10 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜಾನಪದ ಅವಿನಾಶಿ, ಭೂಮಿ ಇರುವವರೆಗೂ ಜಾನಪದ ಇದ್ದೇ ಇರುತ್ತದೆ ಆದರೆ ಕಾಲಘಟ್ಟಕ್ಕೆ ಪರಿವರ್ತನೆ ಗೊಳ್ಳುತ್ತಾಬಂದಿದೆ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಭಿವೃದ್ಧಿ ದಿಕ್ಕಿನಲ್ಲಿ ನಿರಂತರವಾಗಿ ಸಾಗಲಿ ಎಂದು ತಿಳಿಸಿದರು.
ಕನ್ನಡ ಅನ್ನದ ಭಾಷೆಯಾಗಿದ್ದು ಅದನ್ನು ಪ್ರತಿ ಒಬ್ಬ ಕನ್ನಡಿಗ ಗೌರವಿಸಬೇಕು ಎಂದು ಡಾ.ಜಾನಪದ ಎಸ್ ಬಾಲಾಜಿ ಕರೆ ನೀಡಿದರು.
ಸಾನಿದ್ಯ ವಹಿಸಿದ್ದ ಹುಬ್ಬಳ್ಳಿಯ ರುದ್ರಾಕ್ಷಿ ಮಠದ ಪೂಜ್ಯ ಶ್ರೀ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಆಶೀರ್ಚನ ನೀಡಿ, ವಚನ ಸಾಹಿತ್ಯದ ಬಗ್ಗೆ ಹೆಚ್ಚು ಅಭ್ಯಾಸ ಮಾಡಿ ಅನುಸರಿಸಬೇಕೆಂದು ಕರೆ ನೀಡಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ ಟಿ ಎಂ ಭಾಸ್ಕರ ಮಾತನಾಡಿ ಜಾನಪದ ಪ್ರದರ್ಶನ ಕಲೆಗಳು ಹಾಗೂ ಜನಪದ ಕಥನ ಗೀತೆಗಳನ್ನು
ವಿದ್ಯಾರ್ಥಿಗಳು ಕಲಿಯುವ ಮೂಲಕ ಜಾನಪದ ಕುರಿತು ಜಾಗೃತಿ ಮೂಡಿಸಬಹುದು ಎಂದು ತಿಳಿಸಿದರು.

ಸಮ್ಮೇಳನದ ಅಧ್ಯಕ್ಷರು ಪ್ರೊ ಕೆ ಎಸ್ ಕೌಜಲಗಿ, ಸಾಹಿತಿ ಡಾ ಗೋವಿಂದ ಮಣ್ಣುರು, ಜಿಲ್ಲಾ ಅಧ್ಯಕ್ಷರು ಪ್ರೊ. ಲಿಂಗರಾಜ್ ಅಂಗಡಿ,ಮಲ್ಲಿಕಾರ್ಜುನ ಸಾಹುಕಾರ,ಎಂ ಎಂ ಮಾಳಾಗಿ, ಪ್ರೊ ಶೋಭಾ ಹಿತ್ತಲಿಮನಿ, ಪ್ರೊ.ಜಿ. ಬಿ. ಹಳ್ಳಾಳ ಉಪಸ್ಥಿತರಿದ್ದರು.