ಜಾನಪದ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ:ಡಾ ಜಾನಪದ ಎಸ್ ಬಾಲಾಜಿ

Spread the love

ಹುಬ್ಬಳ್ಳಿ: ಜಾನಪದ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ಹುಬ್ಬಳ್ಳಿಯ ಗಂಗಾಧರ ನಗರದ ನೂಲಿಯ ಚಂದಯ್ಯ ಅಂಬೇಡ್ಕರ್ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಹುಬ್ಬಳ್ಳಿ ತಾಲೂಕ ಕನ್ನಡ ಜಾನಪದ ಪರಿಷತ್ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಅಲೌಕಿಕ ಸಂವಿಧಾನ ಇದಕ್ಕೆ ಇತಿ- ಮಿತಿ ಇಲ್ಲ, ಚೌಕಟ್ಟು ಇಲ್ಲ ಎಂದಿಗೂ ನಶಿಸುವುದಿಲ್ಲ, ಇದಕ್ಕೆ ಒಗ್ಗೂಡಿಸುವ ಶಕ್ತಿ ಇದೆ,ಮಹಿಳೆಯರು ಜಾನಪದ ಉಳಿವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ ಅವರಿಂದಲೇ ಜಾನಪದ ಎಂದಿಗೂ ಗಟ್ಟಿಯಾಗಿರುತ್ತದೆ
ಎಂದು ಡಾ.ಜಾನಪದ‌ ಎಸ್ ಬಾಲಾಜಿ ತಿಳಿಸಿದರು.

ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಡಾ ಜ್ಯೋತಿರ್ಲಿಂಗ ಹಣೆಕಟ್ಟಿ ಮಾತನಾಡಿ,ಜಾನಪದ ಮಾನವೀಯ ಮೌಲ್ಯಗಳನ್ನು ಹಾಗೂ ಸಂಸ್ಕಾರವನ್ನು ಕಲಿಸುವುದರಿಂದ ಕನ್ನಡ ಜಾನಪದ ಪರಿಷತ್ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ಜಾನಪದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು.

ಜಾನಪದ ಆಚರಣೆಗಳು, ಪಾರಂಪರಿಕ ವಾಡಿಕೆಗಳು ಹಾಗೂ ಪದ್ಧತಿಗಳನ್ನು ಅನುಸರಿಸಿಕೊಂಡು ಹೋಗುವುದು ವಿದ್ಯಾರ್ಥಿಗಳು ಮತ್ತು ಯುವಜನರ ಕರ್ತವ್ಯ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಕಾರ್ಯದರ್ಶಿ ಪ್ರೊ ಕೆ ಎಸ್ ಕೌಜಲಗಿ ತಿಳಿಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆ ರಾಜ್ಯಾಧ್ಯಕ್ಷ ಸುರೇಶ ಗೋಕಾಕ್ ಮಾತನಾಡಿ ಪಿಜ್ಜಾ, ಬರ್ಗರ್ ಯುಗದಲ್ಲಿ ಇದ್ದರೂ ನಮ್ಮ ಗ್ರಾಮೀಣ ಆಹಾರ ಪದ್ಧತಿಯನ್ನು ನಿರ್ಲಕ್ಷಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರೊ ಪಿ ಬಿ ಪುಲಕೇಶಿ ಶಾಮಣ್ಣನವರ್, ಪ್ರಾಂಶುಪಾಲರು ಎಸ್ ಎಸ್ ಎಸ್ ಸಿ ಡಾ ಅಂಬೇಡ್ಕರ್ ಕಾಲೇಜು, ಪಿ ಎಸ್ ಬಪ್ಪರಮನಿ ಎಂ ಎಸ್ ಎಸ್ ಅಧಿಕಾರಿಗಳು, ಡಾ ಸಪ್ನಾ ಜಾದವ್ ಐಕ್ಯೂಎಸ್‌ಸಿ ಸಂಚಾಲಕರು, ಕನ್ನಡ ಪ್ರಾಧ್ಯಾಪಕಿ ಡಾ ಸವಿತಾ ಕೋಟ್ಬಾಗಿ, ಕನ್ನಡ ಜಾನಪದ ಪರಿಷತ್ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಎಂ, ಹುಬ್ಬಳ್ಳಿ ತಾಲೂಕ ಅಧ್ಯಕ್ಷರು ಈಶ್ವರಪ್ಪ ಕ ಹೊಳೆಮ್ಮನವರು, ಕಾರ್ಯದರ್ಶಿ ಸಂತೋಷ್ ಕುಮಾರ್ ಬಡಿಗೇರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಮಾಮ್ ಸಾಬ್ ಎಮ್ ಮಲ್ಲಪ್ಪನವರ್, ಕಲಘಟಗಿಯ ನಿಂಗಪ್ಪ ಪೂಜಾರಿ, ಅಣ್ಣಿಗೆರೆ ರವಿರಾಜ್ ವರೆಣೆಕರ್,ಧಾರವಾಡ ಜಿಲ್ಲಾ ಸಂಚಾಲಕರು ಜಾನಪದ ಯುವ ಬ್ರಿಗೇಡ್ ಮಹೇಶ್ ತಳವಾರ, ಹಾವೇರಿ ಸಂಚಾಲಕ ಶಿವಯೋಗಿ ಹಾಗೂ ಇತರ ಕಲಾವಿದರು ಪದವಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.