ಮೈಸೂರು: ರಾತ್ರಿ ಸುರಿದ ಮಳೆಗೆ ಮನೆ ಗೋಡೆ ಹಾಗೂ ಮೇಲ್ಛಾವಣಿ ಕುಸಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕು ಕೊಳಘಟ್ಟ ಗ್ರಾಮದಲ್ಲಿ ನಡೆದಿದೆ.
ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕರಗಮ್ಮ ಎಂಬುವರ ಮನೆ ಕುಸಿದಿದೆ. ಮಧ್ಯರಾತ್ರಿ ಮತ್ತೊಂದು ಭಾಗವೂ ಕುಸಿದು ಬಿದ್ದಿದೆ.
ಆದರೆ ಕೂಡಲೇ ಕುಟುಂಬಸ್ಥರು ಹೊರಬಂದಿದ್ದಾರೆ ಹಾಗಾಗಿ ಪಾರಾಗಿದ್ದಾರೆ.ಬಡ ಕರಗಮ್ಮ ನವರಿಗೆ.ಪರಿಹಾರ ನೀಡುವಂತೆ ಕುಟುಂಬಸ್ಥರು ಹಾಗೂ ಸ್ಥಳೀಯರು ಕೋರಿದ್ದಾರೆ.