ಬಿಸಿನೀರಿನ ಪಾತ್ರೆಗೆ ಬಿದ್ದು ಮಗು ಸಾವು

ಮೈಸೂರು: ಬಿಸಿನೀರಿನ ಪಾತ್ರೆಗೆ ಬಿದ್ದು ಮಗು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ.

ಆದಿವಾಸಿ ಜೇನುಕುರುಬ ದಂಪತಿ ರಮ್ಯಾ ಮತ್ತು ಬಸಪ್ಪನವರ ಒಂದೂವರೆ ವರ್ಷದ ಹೆಣ್ಣುಮಗು‌ ಸಾವನ್ನಪ್ಪಿದೆ.

ಸ್ನಾನ ಮಾಡಿಸುವಾಗ ಈ ದುರ್ಘಟನೆ ನಡೆದಿದೆ.ನೀರು ಸುಡುತ್ತಿದ್ದರಿಂದ ತಣ್ಣೀರು ತರಲು ಮನೆಯೊಳಗೆ ಹೋದ ಸಂದರ್ಭದಲ್ಲಿ ಮಗು ಸುಡುವ ನೀರಿನ ಪಾತ್ರೆಗೆ ಬಿದ್ದು ಮೈ ಕಾಲು ಕೈ ಸುಟ್ಟು ಗಂಭೀರ ವಾಗಿತ್ತು.
ತಕ್ಷಣ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು,ಆದರೆ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ.