ಮೈಸೂರು: ಮೈಸೂರಿನ ಹೋಟೆಲ್ ಮೌರ್ಯ ರೆಸಿಡೆನ್ಸಿಯಲ್ಲಿ ಹೊಸ ಬೆಳಕು ಸೇವಾ ಟ್ರಸ್ಟ್ ಉದ್ಘಾಟನೆಯನ್ನು ವಿಶೇಷವಾಗಿ ನೆರವೇರಿಸಲಾಯಿತು.
ಸಾಧಕರಿಗೆ ಸೇವ ರತ್ನ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಹೊಸ ಬೆಳಕು ಸೇವಾ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಾಜಿ ಶಾಸಕರಾದ ಎಲ್ ನಾಗೇಂದ್ರ ಅವರು ಗಣ್ಯರ ಜೊತೆ ಸೇರಿ ಉದ್ಘಾಟನೆ ಮಾಡಿ,
ಸಾಧಕರನ್ನು ಗೌರವಿಸಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.

ಕರಾಟೆ ಮಾಸ್ಟರ್ ದಿಲೀತ್ತು ಉತ್ತಪ್ಪ , ರಕ್ತದಾನಿ ಮಹದೇವಸ್ವಾಮಿ, ಖೋಖೋ ಆಟಗಾರ್ತಿ ಚೈತ್ರ, ಪೊಲೀಸ್ ಇಲಾಖೆಯ ದಿವಾಕರ್, ಆರ್ಟಿಸ್ಟ್ ಗೌರಿ, ಸಮಾಜ ಸೇವಕರಾದ ಪ್ರಭಮಣಿ, ಮಾದೇವಯ್ಯ, ಕಾಂತರಾಜು, ಮಾಲಂಬಿಕ, ಸೌಮ್ಯ ಆರ್ ರವಿ, ಇಬ್ರಾಹಿಂ ರಫೀಕ್ ಅವರುಗಳು ಸನ್ಮಾನ ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸಬೆಳಕು ಸೇವಾ ಟ್ರಸ್ಟ್ ಸಂಸ್ಥಾಪಕರಾದ ಗೀತಾ ಎಮ್ ಎನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹೇಮಾ ನಂದೀಶ್, ಶಿವಪ್ರಸಾದ್, ಮಹೇಶ್, ವಿಕ್ರಂ ಅಯ್ಯಂಗಾರ್, ಶ್ರೀನಿವಾಸ್ ಗುರುಗಳು ಪಾಲ್ಗೊಂಡಿದ್ದರು.