ಮೈಸೂರು: ಹೊಸ ಬೆಳಕು ಸೇವಾ ಟ್ರಸ್ಟ್ ವತಿಯಿಂದ ಮೈಸೂರಿನ ವಿಜಯನಗರ ರೈಲ್ವೆ ಬಡಾವಣೆಯ ಉದ್ಯಾನವನದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಇಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶ್ರೀ ವಿಜಯ ವಿದ್ಯಾ ಮಹಾ ಗಣಪತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗುರುದತ್ ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಇಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಬಟ್ಟಲು ಗಳನ್ನು ಕೊಡುವ ಮುಖಾಂತರ ಮನೆ ಮುಂದೆ ಪ್ರಾಣಿ-ಪಕ್ಷಿಗಳಿಗೆ ನೀರನ್ನು ಇಟ್ಟು ಅವುಗಳ ದಾಹ ನೀಗಿಸಬೇಕೆಂದು ತಿಳುವಳಿಕೆ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಹೊಸ ಬೆಳಕು ಸೇವಾ ಟ್ರಸ್ಟ್ ನ ಅಧ್ಯಕ್ಷೆ ಗೀತಾ, ಪದಾಧಿಕಾರಿಗಳಾದ ಅನಿತಾ, ರಶ್ಮಿ, ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷ ರಕ್ತದಾನಿ ಮಂಜು, ಶ್ರೀ ವಿಜಯ ವಿದ್ಯಾ ಮಹಾ ಗಣಪತಿ ದೇವಸ್ಥಾನದ ಅಧ್ಯಕ್ಷರಾದ ಗುರುದತ್ ಪದಾಧಿಕಾರಿಗಳಾದ ಧರ್ಮೇಗೌಡ, ಶ್ರೀರಾಮುಲು, ಸುಬ್ರಹ್ಮಣ್ಯಂ, ಸದಸ್ಯರಾದ ನಾರಾಯಣ, ಸುರೇಶ್ ಬಾಬು, ಮಂಜುನಾಥ್, ಬಾಲಕೃಷ್ಣ ನಗರ್, ಪಾಂಡುರಂಗ ರಾವ್, ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.