ಮೈಸೂರು, ಜು.1: ವೈದ್ಯರ ದಿನಾಚರಣೆ ಪ್ರಯುಕ್ತ ಶ್ರೀ ದುರ್ಗಾ ಫೌಂಡೇಶನ್ ನವರು ವೈದ್ಯರನ್ನು ಸನ್ಮಾನಿಸಿ ಗೌರವಿಸಿದರು.
ಕಾಳಿದಾಸ ರಸ್ತೆಯಲ್ಲಿರುವ ಕಾಂಗೂರ್ ಕೇರ್ ಫರ್ಟಿಲಿಟಿ ಆಸ್ಪತ್ರೆ ಯಲ್ಲಿ ಖ್ಯಾತ ವೈದ್ಯರಾದ ಡಾ. ದಿಲೀಪ್ ಹಾಗೂ ಡಾ. ಸ್ವಾತಿ ಅವರನ್ನು ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಸಮಾಜ ಸೇವಕಿ ಖುಷಿ ವಿನು, ಸತ್ಯಸಾಯಿ ಸುರಕ್ಷಾ ಕೇಂದ್ರ ಅಧ್ಯಕ್ಷರಾದ ಸರಸ್ವತಿ ಹಲಸಗಿ, ವಕೀಲರಾದ ಜಯಶ್ರೀ ಶಿವರಾಮ್, ಸುಶೀಲ, ಮರಿಯಾ ಆಲ್ಫೋನ್ಸ್
ಜಯಲಕ್ಷ್ಮಿ ,ಕುಮಾರಿ,ಪೂಜಾ
ವಿಕಾಸ್ ,ಗೋಕುಲ್ ಮತ್ತಿತರರು ಹಾಜರಿದ್ದರು.