ಮೈಸೂರು: ಮೈಸೂರು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ) ನೂತನ ಉಪ ನಿರ್ದೇಶಕರಾಗಿ ಎಂ ಪಿ ನಾಗಮ್ಮ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಅಧಿಕಾರ ಸ್ವೀಕರಿಸಿದ ಎಂ ಪಿ ನಾಗಮ್ಮ ಅವರನ್ನು ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್.ದಿನೇಶ್ ಅವರು ಭೇಟಿ ಮಾಡಿ ಅಭಿನಂದಿಸಿ ಶುಭ ಕೋರಿದರು.
ಈ ವೇಳೆ ಪ್ರಾಂಶುಪಾಲರಾದ ಡಾ. ಕಾಳಿ ಪ್ರಸಾದ್, ಡಾ. ರಂಗನಾಥ್ ಮತ್ತು ವಿಜಯ್ ಕುಮಾರ್ ಹಾಜರಿದ್ದರು.