ಹುಣಸೂರು: ಕಳೆದ ಆರು ವರ್ಷಗಳ ಹಿಂದೆ ಹುಣಸೂರು ತಾಲೂಕು ಹೊನ್ನಿಕುಪ್ಪೆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಸಂಖ್ಯೆ 23ರ ಉಪ ವಿತರಣಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಗ್ರಾಮದ ನೂರಾರು ಜನರಿಗೆ ಬಹಳ ಉಪಯೋಗವಾಗುತ್ತಿದೆ.
ಆದರೆ ಈ ನ್ಯಾಯ ಬೆಲೆ ಉಪ ವಿತರಣಾ ಕೇಂದ್ರವನ್ನು ಮೂಲ 23ನೇ ವಾರ್ಡ್ ಕೊಯಮತ್ತೂರು ಕಾಲೋನಿಯಲ್ಲಿನ ಅಂಗಡಿಗೆ ವರ್ಗಾಯಿಸಲು ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಯಾವುದೇ ಕಾರಣಕ್ಕೂ ಹೊನ್ನಿಕುಪ್ಪೆ ಗ್ರಾಮದಿಂದ ನ್ಯಾಯಬೆಲೆ ಅಂಗಡಿ ವರ್ಗಾವಣೆ ಆಗಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಏಳೆಂಟು ವರ್ಷಗಳಿಂದ ಹೋರಾಟ ಮಾಡಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ಸದಸ್ಯರು ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಕಷ್ಟಪಟ್ಟು ಉಪ ವಿತರಣಾ ಕೇಂದ್ರವನ್ನು ಹೊನ್ನಿಕುಪ್ಪೆ ಗ್ರಾಮಕ್ಕೆ ಬರುವಂತೆ ಮಾಡಿದ್ದಾರೆ.ಗ್ರಾಮದ ಜನ ನೆಮ್ಮದಿಯಿಂದ ಪಡಿತರ ಪಡೆಯುತ್ತಿದ್ದಾರೆ.
ಈಗ ಮತ್ತೇನೋ ಕುಂಟುನೆಪ ಹೇಳಿ ಕೊಯಮತ್ತೂರು ಕಾಲೋನಿಯಲ್ಲಿರುವ ಮೂಲ ನ್ಯಾಯಬೆಲೆ ಅಂಗಡಿಗೆ ಸೇರಿಸಲು ಹುನ್ನಾರ ನಡೆದಿದೆ, ಯಾವುದೇ ಕಾರಣಕ್ಕೂ ಹೊನ್ನಿಕುಪ್ಪೆ ಗ್ರಾಮದಿಂದ ನ್ಯಾಯಬೆಲೆ ಅಂಗಡಿ ಸ್ಥಳಾಂತರ ಆಗಬಾರದು ಎಂದು ಗ್ರಾಮಸ್ಥರ ಪರವಾಗಿ ಚೆಲುವರಾಜು ಒತ್ತಾಯಿಸಿದ್ದಾರೆ.
ಜೊತೆಗೆ ಹೊನ್ನಿಕೊಪ್ಪೆ ಗ್ರಾಮದಲ್ಲಿ ಪ್ರತ್ಯೇಕವಾಗಿ ನ್ಯಾಯಬೆಲೆ ಅಂಗಡಿಯನ್ನು ಶಾಶ್ವತವಾಗಿ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೊಯಮತ್ತೂರು ಕಾಲೋನಿಗೆ ಸುಮಾರು 2 ಕಿಮೀ ದೂರವಾಗುತ್ತದೆ. ಇಲ್ಲಿಂದ ಅಲ್ಲಿಗೆ ಹೋಗುವ ರಸ್ತೆ ಸ್ವಲ್ಪವೂ ಸರಿಯಾಗಿಲ್ಲ, ಹಳ್ಳಕೊಳ್ಳಗಳಿಂದ ಕೂಡಿದೆ.
ವಯಸ್ಸಾದವರು ಸಂಚರಿಸಲು ಸಾಧ್ಯವಿಲ್ಲ, ಪಡಿತರವನ್ನು ಹೊತ್ತುಕೊಂಡು ಬರಲು ಆಗುವುದಿಲ್ಲ, ಮಹಿಳೆಯರಿಗೂ ತುಂಬಾ ತೊಂದರೆಯಾಗುತ್ತದೆ ಆದ್ದರಿಂದ ಹೊನೆಕುಪ್ಪೆ ಗ್ರಾಮದಲ್ಲೇ ನ್ಯಾಯಬೆಲೆ ಅಂಗಡಿ ಮುಂದುವರಿಯಬೇಕು ಅದೂ ಶಾಶ್ವತವಾಗಿ ಇರಬೇಕು ಎಂದು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.