ಹೊನ್ನಿಕುಪ್ಪೆ ಗ್ರಾಮದಲ್ಲಿ ಯಶಸ್ವಿಯಾಗಿ ನೆರವೇರಿದ ಗಣಪತಿ ವಿಸರ್ಜನೆ

ಹುಣಸೂರು: ಹುಣಸೂರು ತಾಲೂಕಿನ ಹೊನ್ನಿಕುಪ್ಪೆ ಗ್ರಾಮದಲ್ಲಿ ಕಳೆದ 27ರಿಂದ ಗ್ರಾಮ ದೇವತೆ ದೊಡ್ಡಮ್ಮತಾಯಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಇಂದು ಅದ್ದೂರಿ ಮೆರವಣಿಗೆಯೊಂದಿಗೆ ಸಾಂಗವಾಗಿ ವಿಸರ್ಜನೆ ಮಾಡಲಾಯಿತು.

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ದೇವಾಲಯದ ಆವರದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ದೇವಾಲಯದ ಅರ್ಚಕರ ಮೂಲಕ ಇದುವರೆಗೂ ಸಂಪ್ರದಾಯಬದ್ಧವಾಗಿ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಬರಲಾಗಿತ್ತು.

ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ವತಿಯಿಂದ ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಇಂದು ಗ್ರಾಮದಲ್ಲಿ ಗಣೇಶ‌ ವಿಸರ್ಜನೆ ಪ್ರಯುಕ್ತ ಅನ್ನದಾನ ಹಮ್ಮಿಕೊಳ್ಳಲಾಯಿತು.ಹೊನ್ನಿಕುಪ್ಪೆ ಗ್ರಾಮದವರಲ್ಲದೆ ಅಕ್ಕಪಕ್ಕದ ಗ್ರಾಮದವರು ಕೂಡ ಪಾಲ್ಗೊಂಡಿದ್ದರು

ನಂತರ ಅದ್ದೂರಿ ಬೃಹತ್ ಮೆರವಣಿಗೆಯಲ್ಲಿ ಗಣಪತಿಯನ್ನು ಸಮೀಪದ ಕೆಂಚನಕೆರೆಗೆ ಕೊಂಡೊಯ್ದು ಯಶಸ್ವಿಯಾಗಿ ವಿಸರ್ಜನೆ ಮಾಡಲಾಯಿತು.

ಗ್ರಾಮದಲ್ಲಿ ಯಾವುದೇ ಗಲಭೆ ಗದ್ದಲ ಗೌಜಲು ಉಂಟಾಗದಂತೆ ಪೊಲೀಸರು ಬಿಗಿ ಭದ್ರತೆ ವಹಿಸಿದ್ದರು.

ಹೊನ್ನಿಕುಪ್ಪೆ ಗ್ರಾಮದ ದೊಡ್ಡ ಯಜಮಾನರು ಚಿಕ್ಕ ಯಜಮಾನರು ಸೇರಿದಂತೆ ಅನೇಕ ಮುಖಂಡರು ಮತ್ತು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಎಲ್ಲರೂ ಹಾಜರಿದ್ದು ವಿಶೇಷ.