ಹನಿಟ್ರ್ಯಾಪ್ ಆರೋಪ ಕಲಬುರಗಿ ಕಾಂಗ್ರೆಸ್ ನಾಯಕಿ,ಪತಿ ಬಂಧನ

Spread the love

ಕಲಬುರಗಿ: ಮಾಜಿ ಸಚಿವರೊಬ್ಬರಿಗೆ ಹನಿಟ್ರಾಪ್ ಮಾಡಿದ ಆರೋಪದಲ್ಲಿ ಕಲಬುರಗಿ ಕಾಂಗ್ರೆಸ್ ‌ನಾಯಕಿ ಮತ್ತು ‌ಆಕೆಯ ಪತಿಯಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಸಿಸಿಬಿ ಪೊಲೀಸರು ಕಲಬುರಗಿ ನಲಪಾಡ್‌ ಬ್ರಿಗೇಡ್‌ ಅಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಶುವರಾಜ್ ಪಾಟೀಲ್ ನನ್ನು ಹನಿಟ್ರ್ಯಾಪ್ ಆರೋಪದ ಮೇಲೆ ಬಂಧಿಸಿದ್ದಾರೆ.

ಈಕೆ ಮೊದಲಿಗೆ ವಾಟ್ಸ್ ಆಪ್ ನಲ್ಲಿ ಮಾಜಿ ಸಚಿವರೊಂದಿಗೆ ಚಾಟ್ ಆರಂಭ ಮಾಡಿ ಸಲುಗೆ ಬೆಳೆಸಿಕೊಂಡು ನಂತರ ವಿಡಿಯೋ ಕಾಲ್ ಮಾಡಲು ಆರಂಭಿಸಿದ್ದಾಳೆ.

ನಂತರ ಖಾಸಗಿ ಕ್ಷಣಗಳನ್ನ ವಿಡಿಯೋ ಚಿತ್ರಿಕರಿಸಿಕೊಂಡು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾಳೆ, ನನ್ನ ಬಳಿ ನಿಮ್ಮ ವಿಡಿಯೋ ಇದೆ. 20 ಲಕ್ಷ ಕೊಡಬೇಕು ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾಳೆ.

ಈ ಬಗ್ಗೆ ಮಾಜಿ ಸಚಿವರ ಪುತ್ರ ಸಿಸಿಬಿಗೆ ದೂರು ನೀಡಿದ್ದಾರೆ. ನಂತರ 20 ಲಕ್ಷ ನೀಡುವುದಾಗಿ ಈಕೆಯನ್ನು ಬೆಂಗಳೂರಿಗೆ ಕರೆಸಿ, ಹಣ ಪಡೆಯಲು ಬೆಂಗಳೂರಿಗೆ ಬಂದ ಮಂಜುಳಾ ಮತ್ತು ಆಕೆಯ ಪತಿ ಶಿವರಾಜ್ ಪಾಟೀಲ್ ನನ್ನು ಸಿಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.