ಸಿಎಂ ಸಿದ್ದರಾಮಯ್ಯ ಹುಟ್ಟು ಹಬ್ಬ:ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಹೋಳಿಗೆ ಊಟ

Spread the love

ಮೈಸೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ
ಕೃಷ್ಣರಾಜ ಯುವ ಬಳಗದ ವತಿಯಿಂದ ಗನ್ ಹೌಸ್ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಹೋಳಿಗೆ ಊಟ ನೀಡಲಾಯಿತು.

ಉಪಹಾರ ಸೇವಿಸಲು ಬಂದಂತಹ 70ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಹೋಳಿಗೆಯನ್ನು ನೀಡಿ ಉಪಹಾರದ ಹಣವನ್ನು ವಿತರಿಸಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪನವರು ವಿಶೇಷವಾಗಿ
ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ನವರ ಹುಟ್ಟುಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಬಸವರಾಜ್ ಬಸಪ್ಪ ಅವರಿಗೆ ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ಕಂಸಾಳೆ ರವಿ,ಶ್ರೀಕಾಂತ್ ಯಾದವ್, ನವೀನ್ ಕೆಂಪಿ ಮತ್ತಿತರರು ಸಾಥ್ ನೀಡಿದರು.