ಗಣಪತಿ ತಯಾರಕರ ಪ್ರಾಧಿಕಾರ ರಚಿಸಲುನಜರ್ಬಾದ್ ನಟರಾಜ್ ಮನವಿ

Spread the love

ಮೈಸೂರು: ಮೈಸೂರಿನ ಕುಂಬಾರಗೇರಿ ಯಲ್ಲಿ ಹೊಯ್ಸಳ ಟ್ರಸ್ಟ್ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಿರಿಯ ಮೂರ್ತಿ ತಯಾರಕರನ್ನು ಸನ್ಮಾನಿಸಲಾಯಿತು.

ಚಿತ್ರಶಿಲ್ಪ ಕಲಾ ಕುಟೀರದ ಡಿ. ರೇವಣ್ಣ, ನಿಂಗಮ್ಮ, ಎವರ್ ಗ್ರೀನ್ ಮಾಡಲ್ ವರ್ಕ್ಸ್‌ ನ ರಾಘವೇಂದ್ರ ಎಸ್, ವಿದ್ಯಾ ಗಣಪತಿ ಕಲಾ ನಿಲಯದ ಯಶವಂತ್ ಅವರುಗಳನ್ನು ಸನ್ಮಾನಿಸಲಾಯಿತು.

ಈ‌ ವೇಳೆ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಮಾತನಾಡಿ, ಪಾರಂಪರಿಕ ಶೈಲಿಯಲ್ಲಿ ನೈಸರ್ಗಿಕ ಮಣ್ಣಿನ ಮೂರ್ತಿ ತಯಾರಿಕೆ ಕಲೆ ಉಳಿಯಬೇಕಿದೆ ಎಂದು ಹೇಳಿದರು.

ದೇಶಾದ್ಯಂತ ಮಣ್ಣಿನ ಗಣಪತಿ ತಯಾರಕರು ಕಲಾಕೃತಿ ಕಲಾವಿದರ ಕಲೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಗಣಪತಿ ತಯಾರಕರ ಪ್ರಾಧಿಕಾರ ರಚಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು ‌

ಹೊಯ್ಸಳ ಟ್ರಸ್ಟ್ ಅಧ್ಯಕ್ಷರಾದ ರಾಜೇಶ್ ಪಳನಿ, ಜಿ ರಾಘವೇಂದ್ರ, ನಿರೂಪಕ ಅಜಯ್ ಶಾಸ್ತ್ರಿ,ವರುಣ ಮಹಾದೇವ್, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜ್, ಕಡಕೋಳ ಶಿವಲಿಂಗ, ಲೋಕೇಶ್, ಸೈಯದ್, ಕಿರಣ್, ದುರ್ಗಾ ಪ್ರಸಾದ್ ಮತ್ತಿತರರು ಹಾಜರಿದ್ದರು.