ಮೈಸೂರು: ನಾಡಿನ ಹೆಸರಾಂತ ಸಾಹಿತಿಗಳು ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ಅವರಿಗೆ ಮೈಸೂರಿನ ಹೊಯ್ಸಳ ಕರ್ನಾಟಕ ಸಂಘದಲ್ಲಿ ದೀಪ ಬೆಳಗಿ ಮೌನಚಾರಣೆ ಮಾಡಿ ಸಂತಾಪ ಸೂಚಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷರಾದ ಕೆ. ಆರ್. ಸತ್ಯನಾರಾಯಣ ಅವರು, ಡಾ. ಎಸ್. ಎಲ್. ಭೈರಪ್ಪ ನವರು ನಮ್ಮ ಸಂಘದ ಗೌರವನ್ವಿತ ಧರ್ಮದರ್ಶಿಗಳಾಗಿದ್ದರು ಎಂದು ಸ್ಮರಿಸಿದರು.
ವಿದ್ಯಾರ್ಥಿಯಾಗಿದ್ದಾಗ ಅವರು ಸಂಘದ ವಿದ್ಯಾರ್ಥಿ ನಿಲಯದಲ್ಲಿ ಕೆಲವು ದಿನಗಳ ಕಾಲ ವ್ಯಾಸಂಗ ಮಾಡಿದ್ದುದು ಅವರ ಭಿತ್ತಿ ಕಾದಂಬರಿಯಲ್ಲಿ ದಾಖಲಾಗಿದೆ ಎಂದು ತಿಳಿಸಿದರು.
ಕೆಲ ದಿನಗಳ ಹಿಂದೆ ನಮ್ಮ ವಿದ್ಯಾರ್ಥಿ ನಿಲಯದ ಬಗ್ಗೆ ಕೂಲಂಕುಷವಾಗಿ ನನ್ನ ಬಳಿ ವಿಚಾರಿಸಿದ್ದರು ಮತ್ತು ವಿದ್ಯಾರ್ಥಿ ಗಳ ಬಗ್ಗೆ ಅತೀವ ಕಾಳಜಿ ಇಟ್ಟುಕೊಂಡಿದ್ದರು, ಭೈರಪ್ಪ ನವರ ಅಗಲಿಕೆ ಸಾಹಿತ್ಯ ಲೋಕಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟ ಎಂದು ನುಡಿದರು.
ಮುಂದಿನ ದಿನಗಳಲ್ಲಿ ಭೈರಪ್ಪ ನವರ ಹೆಸರಿನಲ್ಲಿ ಶಾಶ್ವತ ಯೋಜನೆ ಕಲ್ಪಿಸುವುದಾಗಿ ಮಾಹಿತಿ ನೀಡಿದರು.
ಕಾರ್ಯದರ್ಶಿ ಜಯಸಿಂಹ ಮಾತನಾಡಿ ಭೈರಪ್ಪ ನವರು ತಮ್ಮ ಕಾದಂಬರಿ ಗಳಲ್ಲಿ ಈ ನೆಲದ ಮಣ್ಣಿನ ಸಾಮಾಜಿಕ ಜೀವನ ಮತ್ತು ಧಾರ್ಮಿಕ ಕಟ್ಟುಪಾಡುಗಳ ಬಗ್ಗೆ ನಿರ್ಭಿತ ವಾಗಿ ಬರೆಯುತ್ತಿದ್ದರು ಆದರೆ ಅದನ್ನು ವಿವಾದ ವಾಗಿಸಲೆಂದೆ ಕೆಲವು ಪಟ್ಟಭದ್ರ ಹಿತಾಸಕ್ತಿ ಗಳು ಅವರ ಮೇಲೆ ಆರೋಪಿಸುತ್ತಿದರು,ಆದರೂ ಭೈರಪ್ಪ ನವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮುಂದಿನ ಕಾದಂಬರಿಗೆ ಸಾಜ್ಜಾಗುತ್ತಿದ್ದರು ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಸುಂದರಮೂರ್ತಿ, ವಿಜಯ ಕುಮಾರ್,ಶ್ರೀನಿಧಿ, ಹರೀಶ್, ಜಗಧೀಶ್, ರಂಗನಾಥ್, ಪ್ರಶಾಂತ್, ಅನುಪಮಾ, ಶೈಲಜಾ, ವಿಜಯಾಪ್ರಸಾದ್ ಸದಸ್ಯರಾದ ಮಂಜುನಾಥ್, ಚಂದ್ರಶೇಖರ್, ಪ್ರಮೋದ್, ವಿದ್ಯಾರ್ಥಿಗಳಾದ ಲಕ್ಷ್ಮಣ್, ಆದಿತ್ಯ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
