ಹೆಚ್ ಐ ವಿ /ಏಡ್ಸ್ ಸೋಂಕಿತರಿಗೆ ಜಾಗೃತಿ ಸಭೆ

Spread the love

ಮೈಸೂರು: ವಿಶ್ವ ಏಡ್ಸ್‌ ದಿನಾಚರಣೆಯ ಪ್ರಯುಕ್ತ ಹೆಚ್ ಐ ವಿ /ಏಡ್ಸ್ ಸೋಂಕಿತ ರೊಡನೆ ನಗರ ಮತ್ತು ಗ್ರಾಮೀಣ ಅಭಿವೃದ್ಧಿ (CURE) ಸಂಸ್ಥೆಯು ಸಂವಾದ ಹಮ್ಮಿಕೊಂಡು ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿತು.

ಈ ಸಂಸ್ಥೆಯು‌ ಕಳೆದ 17 ವರ್ಷಗಳಿಂದ ಕರ್ನಾಟಕ, ತಮಿಳು ನಾಡು, ಒರಿಸ್ಸಾ ರಾಜ್ಯಗಳಲ್ಲಿ ಸಮುದಾಯದ ಅಭಿವೃದ್ಧಿಯಲ್ಲಿ ಮಕ್ಕಳು, ಮಹಿಳೆಯರು, ಯುವಜನರ ಪರವಾಗಿ ಅಭಿವೃದ್ಧಿ ಕೆಲಸ ಮಾಡುತ್ತಾ ಜೊತೆಗೆ ಎಚ್‌ಐವಿ ಭಾದಿತರಿಗೆ ಮತ್ತು ವಿಧವೆಯರಿಗೆ ಸಂಸ್ಥೆ ವತಿಯಿಂದ ಸಹಾಯ ಮಾಡುತ್ತಾ ಬರುತ್ತಿದೆ.

ಸಂಸ್ಥೆಯು ಐಸಿಆರ್‌ಎಮ್ ಕೇಂದ್ರ ಸಭೆಯಲ್ಲಿ 200ಕ್ಕೂ ಹೆಚ್ಚು ಹೆಚ್.ಐ.ವಿ/ಏಡ್ಸ್ ಸೋಂಕಿತರಿಗೆ ಆರೋಗ್ಯದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿ ಅರುವು‌ ಮೂಡಿಸುವ ಜೊತೆಗೆ
ಅವರಿಗೆ ಅಹಾರದ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ವೇಳೆ ಸಂಸ್ಥೆಯ ನಿರ್ದೇಶಕ ಪಾಸ್ಟರ್ ಮೋಹನ್ ದಾಸ್ ಅವರು ಮಾತನಾಡಿ ಎಚ್ಐವಿ ಬಗ್ಗೆ ಜಾಗರೂಕರಾಗಿರಬೇಕೆಂದು ಸಲಹೆ ನೀಡಿದರು.

ರಿವೈವಲಿನ್ ಜೇಬ ಅವರು ಕ್ರಮಬದ್ಧವಾದ ಪೌಷ್ಟಿಕ ಆಹಾರ ಸೇವನೆಯ ಮಹತ್ವವನ್ನು ತಿಳಿಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಕ್ಯೂ‌ರ್ ಸಂಸ್ಥೆಯ ಮತ್ತು ಐಸಿಆರ್‌ಎಮ್ ಸಭೆಯ ತಂಡದವರು ಪಾಲ್ಗೊಂಡಿದ್ದರು.