ಇತಿಹಾಸವುಳ್ಳ ಮರಗಳಿಗೆ ಕತ್ತರಿ:ನಿತೀಶ್ ಕುಮಾರ್ ಬೇಸರ

Spread the love

ಮೈಸೂರು: ರಸ್ತೆ ಅಗಲೀಕರಣಕ್ಕಾಗಿ ದಶಕಗಳ ಇತಿಹಾಸವುಳ್ಳ 40ಕ್ಕೂ ಅಧಿಕ ಮರಗಳನ್ನು ರಾತ್ರೋರಾತ್ರಿ ಕಡೆದಿದ್ದು ನಿಜಕ್ಕೂ ವಿಷಾದ ನೀಯ ಎಂದು ಯುವ ಮುಖಂಡ ನಿತೀಶ್ ಕುಮಾರ್ ನಿತೀಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಎಸ್ಪಿ ಕಚೇರಿಯಿಂದ ಕಾಳಿಕಾಂಬ ದೇವಾಲಯದವರೆಗೆ ಹೈದರಾಲಿ ರಸ್ತೆ ಅಗಲೀಕರಣಕ್ಕಾಗಿ ಮಹಾರಾಜರ ಕಾಲದಿಂದ ಇದ್ದ ಬಾರಿ ಗಾತ್ರದ ಮರಗಳನ್ನು ಕೇವಲ ರಸ್ತೆಯನ್ನು 10 ರಿಂದ 15 ಅಡಿ ವಿಸ್ತರಿಸಲು ಕಡಿದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅವರು ವಿಷಾದಿಸಿದ್ದಾರೆ.

ಸ್ಥಳೀಯ ರಾಗಿರುವ ನಾವು ಚಿಕ್ಕಂದಿನಿಂದ ಈ ರಸ್ತೆಯಲ್ಲಿ ಹಾದು ಹೋಗುವಾಗ ಈ ಮರಗಳು ನೀಡುತ್ತಿದ್ದ ತಂಪಾದ ನೆರಳು ಉತ್ತಮವಾಗಿ ಬಿಸುತ್ತಿದ್ದ ಗಾಳಿ ಇಂದಿಗೂ ನೆನಪಿಗೆ ಬರುತ್ತದೆ ಅದರಲ್ಲೂ ಬೇಸಿಗೆಯಲ್ಲಂತೂ ಬಿರು ಬಿಸಿಲಿನಲ್ಲಿ ಬೇರೆ ರಸ್ತೆಯಿಂದ ಈ ರಸ್ತೆಗೆ ಸಂಪರ್ಕಿಸುವ ಮಧ್ಯೆ ಜನರು ಮರಗಳ ತಂಪಾದ ನೆರಳಿನಿಂದ ನಿಟ್ಟಿಸಿರು ಬಿಡುತ್ತಿದ್ದರು ಎಂದು ಅವರು ಸ್ಮರಿಸಿದ್ದಾರೆ.

ಆದರೆ ಈಗ ಆ ಮರಗಳು ಇನ್ನು ನೆನಪು ಮಾತ್ರ ಈ ಬೃಹತ್ ಮರಗಳನ್ನು ನಿರ್ದಾಯವಾಗಿ ಕಡಿದು ಹಾಕಿರುವುದನ್ನು ಆರಗಿಸಿಕೊಳ್ಳುವುದು ಕಷ್ಟ. ಮೈಸೂರು ನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಯವರು ಇನ್ನಾದರೂ ಅವೈಜ್ಞಾನಿಕ ಕಾರ್ಯಗಳನ್ನು ನಿಲ್ಲಿಸಿ ಮುಂದೆಯಾದರೂ ಎಚ್ಚೆತ್ತುಕೊಂಡು ಸಾರ್ವಜನಿಕರು ಪರಿಸರವಾದಿಗಳು ಮತ್ತು ಮುಖ್ಯವಾಗಿ ಎಲ್ಲರಿಗೂ ಅನುಕೂಲವಾಗುವಂತಹ ಕಾರ್ಯ ಮಾಡಿದರೆ ಉತ್ತಮ ಎಂದು ನಿತೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.