ಪಿರಿಯಾಪಟ್ಟಣ: ಪಿರಯಾಪಟ್ಟಣ ಬೆಟ್ಟದಪುರ ವೃತ್ತದಲ್ಲಿ ಹಿಂದೂ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯವರು ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದರು.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲೆ ದೌರ್ಜನ್ಯ ಖಂಡಿಸಿ ಮೌನ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಮೈಸೂರು ಜಿಲ್ಲಾ ಅಧ್ಯಕ್ಷರಾದ ನಳಿನಾ ಗೌಡ, ರಾಜೇಗೌಡ, ಹರೀಶ್, ಯಾದವಾಚಾರ್, ಭಾಗ್ಯಕ್ಕ, ಜಯಶ್ರೀ, ಭವ್ಯ,ಪ್ರಸನ್ನ, ಶಿವರಾಮೇಗೌಡ,ಆದರ್ಶ್, ಯಶವಂತ್ ಮತ್ತಿತರರು ಪಾಲ್ಗೊಂಡಿದ್ದರು.
ಬಾಂಗ್ಲಾದೇಶ ಸರಕಾರಕ್ಕೆ ಧಿಕ್ಕಾರ ಧಿಕ್ಕಾರ, ಬಾಂಗ್ಲಾದೇಶದ ಹಿಂದುಗಳನ್ನು ರಕ್ಷಿಸಿರಿ ಮತ್ತು ಅವರಿಗೆ ಸಂರಕ್ಷಣೆ ಒದಗಿಸಿ, ಎದ್ದೇಳಿ ಹಿಂದುಗಳೇ ಎದ್ದೇಳಿ ಭಾರತವನ್ನು ಬಾಂಗ್ಲಾದೇಶಿ ನುಸಳು ಕೋರರಿಂದ ಮುಕ್ತಗೊಳಿಸಿ, ಬಾಂಗ್ಲಾದೇಶದಲ್ಲಾಗುತ್ತಿರುವ ಹಿಂದುಗಳ ನರಸಂಹಾರವನ್ನು ತಕ್ಷಣ ತಡೆಗಟ್ಟಿ, ಒಗ್ಗಟ್ಟಾಗಿದ್ದರೆ ಸುರಕ್ಷಿತರಾಗಿರುವೆವು, ಬಾಂಗ್ಲಾದೇಶಿ ನುಸುಳು ಕೋರರಿಂದ ಮುಕ್ತ ಭಾರತ ಇದುವೇ ನಿಜವಾದ ಸ್ವಚ್ಛತಾ ಅಭಿಯಾನ, ಹಿಂದೂಗಳ ಮೇಲೆ ಆಕ್ರಮಣ ಮಾಡುವ ಮಂದಿರಗಳ ಮೇಲೆ ದಾಳಿ ನಡೆಸುವ ಬಾಂಗ್ಲಾದೇಶಕ್ಕೆ ಧಿಕ್ಕಾರ, ಬಾಂಗ್ಲಾದೇಶಿ ಆಕ್ರಮಣಕಾರರಿಗೆ ಸಹಾಯ ಮಾಡುವವರ ಮೇಲೆ ರಾಜದ್ರೋಹದ ಅಪರಾಧ ದಾಖಲಿಸಿ, ಹಿಂದುಗಳಿಂದ ಒಂದೇ ಬೇಡಿಕೆ ನಿಲ್ಲಿಸಿ ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಅನಾಚಾರ ಮುಂತಾದ ಬರಹಗಳುಳ್ಳ ಭಿತ್ತಿಚಿತ್ರಗಳನ್ನು ಪ್ರತಿಭಟನಾ ನಿರತರು ಪ್ರದರ್ಶಿಸಿದರು.