ಸಂಘ ನಿರ್ಬಂಧಕ್ಕೆ ಸಚಿವ ಖರ್ಗೆ ಪತ್ರ:ಹೇಮಾ ನಂದೀಶ್ ಖಂಡನೆ

Spread the love

ಮೈಸೂರು: ಸರಕಾರಿ ಸಂಸ್ಥೆಗಳ ಜಾಗ,
ಮೈದಾನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದನ್ನು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾನಂದೀಶ್ ತೀವ್ರವಾಗಿ ಖಂಡಿಸಿದರೆ.

ಆರ್‌ಎಸ್‌ಎಸ್ ಪ್ರಕೃತಿ ವಿಕೋಪ ಮತ್ತು ದುರಂತಗಳ ಸಂದರ್ಭದಲ್ಲಿ ಮೊದಲು ಸಹಾಯಕ್ಕೆ ನಿಲ್ಲುತ್ತದೆ. ಇದನ್ನು ಪರಿಗಣಿಸಿ, 1963ರಲ್ಲಿ ದಿಲ್ಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆಗಿನ ಪ್ರಧಾನಿ ಜವಾಹರಲಾಲ್‌ ನೆಹರು ಅವರು
ಆರ್‌ಎಸ್‌ಎಸ್‌ನವರಿಗೆ
ಗಣವೇಷಧಾರಿಗಳಾಗಿ ಭಾಗವಹಿಸುವಂತೆ ಆಹ್ವಾನ ನೀಡಿದ್ದರು ಎಂಬುದನ್ನು‌ ಮೊದಲು ಮನಗಾಣಿ ಎಂದು ಸಲಹೆ ನೀಡಿದ್ದಾರೆ.

2024ರಲ್ಲಿ ಕೇಂದ್ರ ಸರಕಾರವು ಸಂಘವನ್ನು ಸಾಮಾಜಿಕ ಸಂಘಟನೆ ಎಂದು ಪರಿಗಣಿಸಿ, ಕಾಂಗ್ರೆಸ್ ಪಕ್ಷದ ಆಡಳಿತವು ಹಿಂದೆ ಹಾಕಿದ್ದ ನಿಷೇಧವನ್ನು ತೆಗೆದು ಹಾಕಿದೆ. ಸಂಘದ ಚಟುವಟಿಕೆಗಳಲ್ಲಿ ಸರಕಾರಿ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸಬಹುದೆಂದು ಆದೇಶ ಹೊರಡಿಸಿದೆ. ಇಂತಹ ರಾಷ್ಟ್ರ ಪ್ರೇಮ ಬೆಳೆಸುವ ಸಂಘಟನೆಯ ಚಟುವಟಿಕೆಗಳಿಗೆ ನಿಷೇಧ ಹೇರಲು ಮುಂದಾಗಿರುವುದು ಖಂಡನೀಯ ಎಂದು ಹೇಮಾ ನಂದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.