ಮೈಸೂರು: ಅಮೆರಿಕ ವಿವಿಯಲ್ಲಿ
ಭಾರತದ ಮೀಸಲಾತಿ ಕುರಿತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ಖಂಡಿಸಿದ್ದಾರೆ.
ಸಮಾನತೆ ಸಂದೇಶ ಸಾರುವ ಮೂಲಕ ದಲಿತರು ಹಾಗೂ ಹಿಂದುಳಿದವರ ಅನುಕೂಲಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಣೆ ಮಾಡಿದ್ದಾರೆ. ಅದನ್ನು ಗೌರವಿಸುವ ಬದಲು ರಾಹುಲ್ ಗಾಂಧಿಯವರು, ಮೀಸಲಾತಿ ತೆಗೆದು ಹಾಕುವ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಕೂಡಲೇ ರಾಹುಲ್ ಗಾಂಧಿ ಯವರು ತಮ್ಮ ಹೇಳಿಕೆ ಹಿಂಪಡೆಯುವ ಜತೆಗೆ ದೇಶದ ಜನತೆಯ ಕ್ಷಮೆಯಾಚಿ ಸಬೇಕು. ಇಲ್ಲದೇ ಹೋದಲ್ಲಿ ರಾಹುಲ್ ಗಾಂಧಿಯವರ ವಿರುದ್ದ ದೇಶಾದ್ಯಂತ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಮಾನಂದೀಶ್ ಎಚ್ಚರಿಸಿದ್ದಾರೆ.