ಮೈಸೂರು: ಹೆಲ್ಮೆಟ್ ಧರಿಸುವ ವ್ಯವಸ್ಥೆಯನ್ನ ಕೈಬಿಡುವಂತೆ ಆಗ್ರಹಿಸಿ ಬನ್ನೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಹೆಲ್ಮೆಟ್ ಧರಿಸದ ವಾಹನ ಸವಾರರ ಮೇಲೆ ದಂಡ ವಿಧಿಸಲಾಗಿದೆ.ಸಾವಿರಾರು ರೂಗಳನ್ನ ಪಾವತಿಸುವಂತೆ ವಾಹನ ಸವಾರರಿಗೆ ನೋಟೀಸ್ ಬಂದಿದೆ ಇದರಿಂದ ಬಡಜನರಿಗೆ ತೊಂದರೆ ಆಗುತ್ತಿದೆ ಎಂದು ಪ್ರತಿಭಟನಾ ನಿರತರು ದೂರಿದರು.
ಹೆಲ್ಮೆಟ್ ವ್ಯವಸ್ಥೆಯನ್ನ ಕೈಬಿಡುವಂತೆ ಆಗ್ರಹಿಸಿ ರೈತ ಮುಖಂಡ ಬನ್ನೂರು ನಾರಾಯಣ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ವೃತ್ತಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳನ್ನ ತೆರುವುಗೊಳಿಸಬೇಕು,ದಂಡದಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಿವರಾಮು,ಪಾರ್ಥ, ಮಹದೇವು,ಚಂದ್ರು ರಾಜು,ಚೇತನ್, ಜೈರಾಮ್, ಜೈರಾಮ್, ಪುಟ್ಟಸ್ವಾಮಿ,ಆಮದ್ ಬಾಬು,ದೊರೆಸ್ವಾಮಿ, ನಾಗಣ್ಣ,ಸ್ವಾಮೀರಾಜು, ಎತ್ತಿನ ಗಾಡಿ ಕೆಂಚ ಕುಮಾರ,ಉಮೇಶ, ಲಕ್ಷ್ಮಣ,ನಾಗಣ್ಣ ಮತ್ತಿತರರು ಭಾಗವಹಿಸಿದ್ದರು.