ಮೈಸೂರು: ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದ್ದು,ಶನಿವಾರ ಚಾಲನೆ ನೀಡಲಾಯಿತು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ದಸರಾ ವಸ್ತು ಪ್ರದರ್ಶನದ ಆರೋಗ್ಯ ಮತ್ತು ಸ್ವಚ್ಛತಾ ಉಪಸಮಿತಿ ವತಿಯಿಂದ ವಸ್ತು ಪ್ರದರ್ಶನ ಆವರಣದಲ್ಲಿ ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದ ಮಳಿಗೆಯನ್ನ ಉದ್ಘಾಟಿಸಲಾಯಿತು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರು ಮಾತನಾಡಿ ಸಮಾಜದಲ್ಲಿ ಆರ್ಥಿಕ ಶ್ರೀಮಂತನಿಗಿಂತ ಆರೋಗ್ಯವಂತ ಮನುಷ್ಯನೇ ನಿಜವಾದ ಭಾಗ್ಯವಂತ ಎಂದು ಹೇಳಿದರು.
ಕಾಂಕ್ರಿಟ್ ಕಟ್ಟಡ, ವಾಯು ಮಾಲಿನ್ಯ ಹೆಚ್ಚಾಗಿ ನೈಜ ಪರಿಸರವನ್ನ ಹಾಳುಮಾಡಕೊಳ್ಳುತ್ತಿದ್ದೇವೆ, ಪ್ರತಿಯೊಬ್ಬರು ಆರೋಗ್ಯ ವಿಮೆ ಮಾಡಿಸಲು ಮುತುವರ್ಜಿ ವಹಿಸುವಷ್ಟೇ ಗಿಡ ನೆಡಲು ಮುಂದಾಗಬೇಕು
ಎಂದು ಕರೆ ನೀಡಿದರು.
ಪ್ರತಿಯೊಬ್ಬ ನಾಗರೀಕನೂ ಸಹ ಆರೋಗ್ಯ ಕಾಳಜಿ ವಹಿಸಬೇಕು,ವ್ಯಾಯಾಮ ಧ್ಯಾನ, ಆಹಾರ ಪದ್ದತಿಯ ಬಗ್ಗೆ ಹೆಚ್ಚು ಗಮನವಹಿಸಬೇಕು, ಕನಿಷ್ಠ 3ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಿಸಿಕೊಂಡರೆ ನೆಮ್ಮದಿಯ ಆರೋಗ್ಯದೊಂದಿಗೆ ಬದುಕಬಹುದು ನಮ್ಮ ದಸರಾ ವಸ್ತುಪ್ರದರ್ಶನದಲ್ಲಿ ಆರೋಗ್ಯ ಮತ್ತು ಸ್ವಚ್ಛತಾ ಸಮಿತಿಯ ವತಿಯಿಂದ ಪ್ರತಿ ಶನಿವಾರ, ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು ಪ್ರವಾಸಿಗರು, ಪ್ರೇಕ್ಷಕರು ಇದನ್ನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಯೂಬ್ ಖಾನ್ ಕೋರಿದರು.
ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಗಂಧನಹಳ್ಳಿ ವೆಂಕಟೇಶ್ ಮಾತನಾಡಿ ಒತ್ತಡದ ದುಡಿಮೆಯ ವ್ಯಕ್ತಿಗಳ ಕುಟುಂಬಕ್ಕೆ ಆರೋಗ್ಯ ಬಹಳ ಮುಖ್ಯ, ಆರೋಗ್ಯ ಕೈಕೊಟ್ಟಾಗ ಮಾತ್ರ ಆಸ್ಪತ್ರೆ ಚಿಕಿತ್ಸೆ ಎಂದು ಅಲೆಯುವ ಬದಲು, ಆರೋಗ್ಯ ವೈಫಲ್ಯ ಸೂಕ್ಷ್ಮಗಳು ಬರುವ ಮುನ್ನವೇ ಆರೋಗ್ಯ ತಪಾಸಣೆಗೆ ಮುಂದಾದರೆ ಎಷ್ಟೋ ಪ್ರಾಣ ಉಳಿಯುತ್ತದೆ, ಈ ಆರೋಗ್ಯ ತಪಾಸಣೆ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಸಿ ಇ ಒ ರುದ್ರೇಶ್,ಮಾಜಿ ಉಪ ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಕುರುಬರ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ, ಅಲ್ಪಸಂಖ್ಯಾತ ಅಧ್ಯಕ್ಷರಾದ ಆರಿಫ್ ಪಾಷಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿರಿಹುಂಡಿ ಬಸವಣ್ಣ, ಹಿನಕಲ್ ಉದಯ್, ದಕ್ಷಿಣಾಮೂರ್ತಿ, ಶೌಕತ್ ಅಲಿಖಾನ್, ಆರೋಗ್ಯ ಮತ್ತು ಸ್ವಚ್ಛತಾ ಉಪ ಸಮಿತಿಯ ಕಾರ್ಯಧ್ಯಕ್ಷ ಫೈರೋಜ್ ಖಾನ್, ಉಪಾಧ್ಯಕ್ಷ ಪದ್ಮನಾಭನ್, ಮೊಸಿನ್ ಖಾನ್, ನಾಜೀರ್ ಖಾನ್, ಮಹೇಂದ್ರ ಕಾಗಿನೆಲೆ, ಮಲ್ಲಿಕಾರ್ಜುನ್, ಜಗದೀಶ್, ರಂಗಸ್ವಾಮಿ, ಮತ್ತಿತರರು ಹಾಜರಿದ್ದರು.