ಮೈಸೂರು: ಕಳುವು ಮಾಡಿದ ಚಿನ್ನಾಭರಣಗಳನ್ನ ಪಡೆದು ಮಾರಾಟ ಮಾಡಿಸಲು ಯತ್ನಿಸಿದ ಹೆಡ್ ಕಾನ್ಸ್‌ಟೇಬಲ್ ಹಾಗೂ ಇಬ್ಬರು ಮನೆಗಳರನ್ನು ಮಂಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಶೋಕ ಪುರಂ ಪೊಲೀಸ್ ಠಾಣೆಯ ಮುಖ್ಯಪೇದೆ ರಾಜು ಮೇಲೆ ಆರೋಪ ಕೇಳಿ ಬಂದಿದೆ. ಇಬ್ಬರು ಮನೆಗಳ್ಳರಾದ ನಜರುಲ್ಲಾ ಬಾಬು ಮತ್ತು ಅಲೀಂ ಬಂಧಿತರಾಗಿದ್ದಾರೆ.
ಮೈಸೂರಿನ ವಿವಿದ ಪೊಲೀಸ್ ಠಾಣೆಗಳಲ್ಲಿ ನಡೆದ ಮನೆಗಳುವು ಪ್ರಕರಣಗಳಿಗೆ ಸಂಭಂಧಿಸಿದಂತೆ ಸುಮಾರು 400 ಗ್ರಾಂ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ.
ಈ ಪೈಕಿ ಮುಖ್ಯಪೇದೆ ರಾಜು ಸುಮಾರು 300 ಗ್ರಾಂ ಚಿನ್ನಾಭರಣ ಪಡೆದಿದ್ದರೆಂದು ಆರೋಪಿಸಲಾಗಿದೆ.
ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳುವು ಪ್ರಕರಣವೊಂದರಲ್ಲಿ ನಜರುಲ್ಲಾ ಬಾಬು ಹಾಗೂ ಅಲೀಂ ಸಿಕ್ಕಿಬಿದ್ದಿದ್ದರು.
ವಿಚಾರಣೆ ವೇಳೆ ಆರೋಪಿಗಳು ದೇವರಾಜ,ಶ್ರೀರಂಗಪಟ್ಟಣ ಹಾಗೂ ಇನ್ನಿತರ ಪೊಲೀಸ್ ಠಾಣೆಯಲ್ಲಿ ಕಳುವು ಮಾಡಿದ್ದಾಗಿ ಒಪ್ಪಿಕೊಂಡು ಸುಮಾರು 400 ಗ್ರಾಂ ಚಿನ್ನಾಭರಣ ಕಳುವು ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ.
ಅದರಲ್ಲಿ ಸುಮಾರು 300 ಗ್ರಾಂ ಚಿನ್ನಾಭರಣವನ್ನು ಮುಖ್ಯಪೇದೆ ರಾಜು ಪಡೆದಿದ್ದರೆಂದು ವಿಚಾರಣೆ ವೇಳೆ ತಿಳಿಸಿದ್ದಾರೆ.
ಹಾಗಾಗಿ ಮಂಡಿ ಠಾಣೆ ಪೊಲೀಸರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಡಿಸಿಪಿಗಳಾದ ಮುತ್ತುರಾಜ್ ಮತ್ತು ಜಾಹ್ನವಿ ರವರ ಗಮನಕ್ಕೆ ತಂದಿದ್ದಾರೆ.
ಮುಖ್ಯಪೇದೆ ರಾಜು ನನ್ನು ವಿಚಾರಣೆಗೆ ಒಳಪಡಿಸಿದಾಗ ಚಿನ್ನಾಭರಣ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶದಂತೆ ಇಬ್ಬರು ಮನೆಗಳ್ಳರು ಹಾಗೂ ಮುಖ್ಯಪೇದೆ ರಾಜು ಮೇಲೆ ಮಂಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕಳುವು ಮಾಲನ್ನ ವಶಪಡಿಸಿಕೊಂಡಿದ್ದಾರೆ.