ಮೇ18 ರಂದು ಎಚ್ ಡಿ ದೇವೇಗೌಡರ ಹುಟ್ಟುಹಬ್ಬ ಅಂಗವಾಗಿ ಸೇವಾ ಕಾರ್ಯ

Spread the love

ಮೈಸೂರು: ಎಚ್ ಡಿ ದೇವೇಗೌಡ ಅಭಿಮಾನಿ ಬಳಗ ಹಾಗೂ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ಮೇ.18ರಂದು ಸೇವಾಕಾರ್ಯ ಹಮ್ಮಿಕೊಳ್ಳಲಾಗಿದೆ.

ಅಂದು ಅರವಿಂದ್ ನಗರದಲ್ಲಿರುವ ಜೆ ಎಸ್ ಎಸ್ ವೃದ್ಧಾಶ್ರಮದಲ್ಲಿ ಮೇ 18ರಂದು ಸಂಜೆ 6ಗಂಟೆಗೆ ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ಹಾಗೂ ಸೀರೆ, ಪಂಚೆ ವಿತರಿಸುವ ಮೂಲಕ ಸೇವಾ ಕಾರ್ಯವನ್ನು ಆಯೋಜಿಸಲಾಗಿದೆ ಎಂದು ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ, ಜೆಡಿಎಸ್ ನಗರ ಅಧ್ಯಕ್ಷ ಕೆ ಟಿ ಚೆಲುವೆಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ವೈ ಡಿ ರಾಜಣ್ಣ, ಹಿರಿಯ ಸಮಾಜ ಸೇವಕ ಕೆ ರಘುರಾಮ್ ವಾಜಪೇಯಿ, ಜೆಡಿಎಸ್ ನಗರ ಹಿರಿಯ ಉಪಾಧ್ಯಕ್ಷ ಪಾಲ್ಕನ್ ಬೋರೇಗೌಡ
ತರರು ಭಾಗವಹಿಸಲಿದ್ದಾರೆ.