ಹಗಲಲ್ಲೇ ಹೆಚ್.ಡಿ.ಕೋಟೆ ಬಳಿ ಎರಡು ಮರಿಗಳೊಂದಿಗೆ ಕಾಣಿಸಿಕೊಂಡ‌ ಚಿರತೆ

Spread the love

ಹೆಗ್ಗಡದೇವನಕೋಟೆ:‌ ತಾಲೂಕಿನ ಕೆಲ ಗ್ರಾಮಗಳ ಸಮೀಪ ಹಗಲಿನಲ್ಲೇ ಹುಲಿಗಳ ಓಡಾಟ ಕಂಡುಬಂದಿದ್ದು ಗ್ರಾಮಸ್ಥರು ಜಮೀನಿಗೆ ಹೋಗಲು ಆತಂಕ ಪಡುತ್ತಿದ್ದಾರೆ.

ಒಂದಲ್ಲ ಎರಡಲ್ಲ ಮೂರು ಹುಲಿಗಳ ಓಡಾಡಿರುವುದು ಹೆಜ್ಜೆ ಗುರಿತುಗಳಿಂದ ಗೊತ್ತಾಗಿದೆ.

ಹೆಚ್.ಡಿ.ಕೋಟೆಗೆ ಸಮೀಪ ಇರುವ ಚಾಕಹಳ್ಳಿ ಗ್ರಾಮದ ರವಿಕುಮಾರ್ ಎಂಬುವರ ಜಮೀನಿನಲ್ಲಿ ಮರಗೆಣಸು ಬೆಳೆದಿರುವ ಪ್ರದೇಶದಲ್ಲಿ ಬೆಳಗ್ಗೆ ಸುಮಾರು 11.30 ರಲ್ಲಿ ಹುಲಿ ಮತ್ತು ಮರಿಗಳು ಕಾಣಿಸಿವೆ

ರವಿಕುಮಾರ್ ಅವರು ಜಮೀನಿಗೆ ನೀರು ಹಾಯಿಸುವ ವೇಳೆ ಜಮೀನಿನಲ್ಲಿ ಎರಡು ಮರಿಗಳೊಂದಿಗೆ ಬೀಡು ಬಿಟ್ಟಿದ್ದ ತಾಯಿ ಹುಲಿ ರವಿಕುಮಾರ್ ಬರುವುದನ್ನು ಕಂಡು ತನ್ನ ಮರಿಗಳೊಂದಿಗೆ ಆರು ಅಡಿ ಎತ್ತರದ ಬೇಲಿಯನ್ನು ಹಾರಿ ಹೋಗಿವೆ.

ನಂತರ ನೆರೆಹೊರೆಯವರ ಸಹಾಯದೊಂದಿಗೆ ಮತ್ತೊಮ್ಮೆ ಜಮೀನಿನ ಬಳಿ ಪರಿಶೀಲಿಸಿದಾಗ ಹುಲಿ ಹೆಜ್ಜೆಗಳು, ಹಾಗೂ ಅದು ಮಲಗಿರುವ ಒದ್ದಾಡಿರುವ ಗುರುತುಗಳು ಮಳೆಯ ಕಾರಣದಿಂದ ಸ್ಪಷ್ಟವಾಗಿ ಗೋಚರಿಸುತ್ತಿವೆ.

ಈ ಸಂಬಂಧ ಹೆಚ್. ಡಿ. ಕೋಟೆ ವಲಯ ಅರಣ್ಯಾಧಿಕಾರಿ ಪೂಜಾ ಯಲಿಗಾರ್, ಉಪ ವಲಯ ಅರಣ್ಯ ಅಧಿಕಾರಿ ಸ್ನೇಹ, ಪರಮೇಶ್, ಕವಿನ, ಹಾಗೂ 25ಕ್ಕೂ ಹೆಚ್ಚು ಮಂದಿ ಚಿರತೆ ಮತ್ತು ಹುಲಿ ಸಂರಕ್ಷಣಾ ಪಡೆ ಸುರಕ್ಷತಾ ಸಾಧನಗಳೊಂದಿಗೆ ಸ್ಥಳಕ್ಕೆ ಆಗಮಿಸಿ ರೈತಾಪಿ ಮಂದಿ ತೋರಿಸಿದ ಜಾಗಕ್ಕೆ ಭೇಟಿ ನೀಡಿ ಹುಲಿ ಹೆಜ್ಜೆಯ ಮಹಜರು ಮಾಡಿದರು.

ಹುಲಿ ಮತ್ತು ಮರಿಗಳನ್ನು ಹಿಡಿಯಲು ಕಾರ್ಯಾಚರಣೆಗೆ ಇಳಿದಿರುವ ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಅಧಿಕಾರಿಗಳ ನಿರ್ದೇಶನಕ್ಕೆ ಕಾಯುತ್ತಿರುವುದಾಗಿ ಹೆಚ್.ಡಿ. ಕೋಟೆ ವಲಯ ಅರಣ್ಯ ಅಧಿಕಾರಿ ಪೂಜಾ ಯಲಿಗಾರ್ ತಿಳಿಸಿದ್ದಾರೆ.