ಹತ್ತನೆ ಚಾಮರಾಜ ಒಡೆಯರ್ ಅವರ ಕೊಡುಗೆ ಅಪಾರ-ಅಯೂಬ್ ಖಾನ್

Spread the love

ಮೈಸೂರು: ಮೈಸೂರು ವಿಶ್ವ ಖ್ಯಾತವಾಗಲು ಸಾಂಸ್ಕೃತಿಕ ಸಾಮಾಜಿಕ ಹಾಗೂ ವೈಜ್ಞಾನಿಕ ದೂರದೃಷ್ಟಿಯುಳ್ಳ ಮಹರಾಜರಾದ ಹತ್ತನೆ ಚಾಮರಾಜ ಒಡೆಯರ್ ರವರ ಕೊಡುಗೆ ಅಪಾರವಾದುದು ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಬಣ್ಣಿಸಿದರು.

ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಹತ್ತನೆ ಚಾಮರಾಜ ಒಡೆಯರ್ ಅವರ 156ನೇ ಜಯಂತಿ‌ ಅಂಗವಾಗಿ ಕೃಷ್ಣರಾಜ ಯುವ ಬಳಗದ ವತಿಯಿಂದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದ ಹತ್ತನೆ ಚಾಮರಾಜ ಒಡೆಯರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಯೂಬ್ ಖಾನ್ ಮಾತನಾಡಿದರು.

ಮೈಸೂರಿಗರಿಗೆ ಒಂದೆ ಸೂರಿನಡಿಯಲ್ಲಿ ಸ್ವದೇಶಿ ಮತ್ತು ಅಂತರಾಷ್ಟ್ರೀಯ ಪದಾರ್ಥಗಳ ಪರಿಚಯ ಮಾರಾಟ,‌ ಕಲೆ ಸಾಹಿತ್ಯ ಸಂಗೀತ, ರೈತಾಪಿ ಚಟುವಟಿಕೆ, ಕರಕುಶಲ ಉತ್ಪನ್ನ ಸ್ಥಳೀಯ ವ್ಯಾಪರಸ್ಥರನ್ನ ಪ್ರೋತ್ಸಾಹಿಸಲು ಮೈಸೂರು ದಸರಾ ವಸ್ತುಪ್ರದರ್ಶನವನ್ನ 1880ರಲ್ಲಿ ಜೀವರಾಯನ ಕಟ್ಟೆ ಮೈದಾನದಲ್ಲಿ ಮೊದಲು ಪ್ರಾರಂಭಿಸಿದ್ದು, ಬೆಂಗಳೂರು ಅರಮನೆ, ಮೈಸೂರು ಮೃಗಾಲಯ, ಮೈಸೂರು ಮಹಾರಾಜ ಕಾಲೇಜು, ಮೈಸೂರು ಸಂಸ್ಕೃತ ಪಾಠಶಾಲೆ, ಲ್ಯಾನ್ಸ್ ಡೌನ್ ಬಜಾರ್, ಲಾಲ್ಬಾಗ್ ಗಾಜಿನ ಅರಮನೆ ಸೇರಿದಂತೆ 1881ರಲ್ಲಿ ಮೈಸೂರು ಕೌನ್ಸಿಲ್ ಪ್ರಜಾಪ್ರತಿನಿಧಿ ಸಭೆಯನ್ನ ಪ್ರಾರಂಭಿಸಿ ಆದುನಿಕ ಪ್ರಜಾಪ್ರಭುತ್ವ ಶಾಸಕಾಂಗ ಸಂಸ್ಥೆಯಾಗಿ ಸ್ಥಾಪಿಸಿ ಅಪಾರ ಕೊಡುಗೆ ನೀಡಿರುವ ಹತ್ತನೆ ಚಾಮರಾಜ ಒಡೆಯರ್ ಅವರನ್ನು ನಾಡಿನ ಯಾರೂ ಮರೆಯಬಾರದು ಎಂದು ತಿಳಿಸಿದರು.

ಮಹಿಳೆಯರಿಗೆ ಸಮಾನ ನೀಡುವ ಶಿಕ್ಷಣ ಜಾರಿಗೆ ತರುವಲ್ಲಿ ಶ್ರಮಿಸಿದರು, ದಿವಾನ್ ರಂಗಾಚಾರ್ಲು, ದಿವಾನ್ ಶೇಷಾದ್ರಿ ಅಯ್ಯರ್ ಅವರನ್ನ ನೇಮಿಸಿ ಹಲವಾರು ಅಭಿವೃದ್ದಿ ಆಡಳಿತ ಕೆಲಸಕ್ಕೆ ಆಧುನಿಕ ಸ್ಪರ್ಶಿ ಕೊಟ್ಟವರು ಹತ್ತನೆ ಚಾಮರಾಜ ಒಡೆಯರ್ ರವರು ಎಂದು ಕೊಂಡಾಡಿದ್ದಾರು.

ಸ್ವತಃ ಪಿಟೀಲು ವಾದಕರಾದ ಚಾಮರಾಜ ಒಡೆಯರ್ ರವರು ಕಲೆ, ಸಂಗೀತ ಸಾಂಸ್ಕೃತಿಕ ಅಭಿರುಚಿಯನ್ನ ಮೈಸೂರಿಗರಿಗೆ ಪರಿಚಯಿಸಿ ವೀಣೆ ಸುಬ್ಬಣ್ಣರ ಗಾಯನ, ವೀಣೆ ಶಾಮಣ್ಣ, ಬಿಡಾರಾಂ ಕೃಷ್ಣಪ್ಪ, ವಾಸುದೇವಾಚಾರ್, ವೀಣೆ ಪದ್ಮನಾಭಯ್ಯ, ಮೈಸೂರು ಕರಿಗಿರಿ ರಾವ್ ರವರನ್ನ ಸಾಂಸ್ಕೃತಿಕ ಲೋಕದ ಮುಖ್ಯವಾಹಿನಿಗೆ ಪರಿಚಯಿಸಿದರು.

ಇಂದಿನ ಮೈಸೂರು ನಗರಪಾಲಿಕೆ ಅಧಿಕಾರಿಗಳು ಮಹಾರಾಜರಾಗಿದ್ದ ಹತ್ತನೇ ಚಾಮರಾಜ ಒಡೆಯರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 156ನೇ ಜಯಂತಿ ಆಚರಿಸಿ ಗೌರವ ಸೂಚಿಸಬೇಕಿತ್ತು,ಆದರೆ ಚಾಮರಾಜ ಒಡೆಯರ್ ಪ್ರತಿಮೆಯನ್ನ ವೃತ್ತವನ್ನ ಕನಿಷ್ಠ ಸ್ವಚ್ಛತೆ ಕೂಡಾ ಮಾಡದಿರುವುದು ಬೇಸರದ ಸಂಗತಿ ಎಂದು ಅಯೂಬ್ ಖಾನ್ ವಿಷಾದಿಸಿದರು.

ಮುಂದಿನ ದಿನದಲ್ಲಿ ಮೈಸೂರು ನಗರಪಾಲಿಕೆ ವತಿಯಿಂದ ಹತ್ತನೆ ಚಾಮರಾಜ ಒಡೆಯರ್ ರವರ ನಾಮಫಲಕ ಮತ್ತು ಇತಿಹಾಸವನ್ನ ಸ್ಮರಿಸುವ ಮಾಹಿತಿ ಫಲಕ ಪ್ರದರ್ಶಿಸಿದರೆ ಮುಂದಿನ‌ಪೀಳಿಯ ಯುವಕರಿಗೆ ಪ್ರವಾಸಿಗರಿಗೆ ಮಾಹಿತಿ ತಲುಪುತ್ತದೆ ಎಂದು ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ನಗರಪಾಲಿಕೆ ಮಾಜಿ ಸದಸ್ಯ ರಘುರಾಜೇ ಅರಸ್, ಕೃಷ್ಣರಾಜೇಂದ್ರ ಬ್ಯಾಂಕ್ ಅಧ್ಯಕ್ಷ ಬಸವರಾಜು ಬಸಪ್ಪ, ಮೈಸೂರು ಕೋ- ಆಪರೇಟಿವ್ ಬ್ಯಾಂಕ್ ನಿರ್ದೇಶಕಿ ರಾಜೇಶ್ವರಿ, ನಿರೂಪಕ‌ ಅಜಯ್ ಶಾಸ್ತ್ರಿ, ಯುವ ಮುಖಂಡ ಜಿ. ರಾಘವೇಂದ್ರ, ಓಸಮಾ ಖಾನ್, ಸಮಾಜಸೇವಕ ಪ್ರಕಾಶ್ ಪ್ರಿಯದರ್ಶನ್, ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್ ರಾಜೇಶ್, ರಂಗಸ್ವಾಮಿ‌ ಪಾಪು, ವಕೀಲರಾದ ನಾಗಬಸವಣ್ಣ, ಕೆಅರ್ ಕಾಂಗ್ರೆಸ್ ಯುವ ಅಧ್ಯಕ್ಷರಾದ ಹೊಯ್ಸಳ ರಾಘವ, ರೋಹಿತ್ ಸಿಂಗ್, ಶಶಾಂಕ್, ಅಭಿಶೇಕ್, ಶರತ್, ಪಾಂಡು ನಾರಾಯಣ ಇನ್ನಿತರರು ಹಾಜರಿದ್ದರು.