ಹಾಸನ: ಮೈಸೂರಿನ ಅರ್ಜುನ ಅವಧೂತ ಗುರೂಜಿ ಅವರು ಹಾಸನಕ್ಕೆ ಭೇಟಿ ನೀಡಿ ಪುರಾಣ ಪ್ರಸಿದ್ದ ಹಾಸನಂಬೆ ದೇವಿ ದರ್ಶನ ಪಡೆದರು.
ಈ ವೇಳೆ ಮಾಧ್ಯಮ ಗಳೊಂದಿಗೆ ಮಾತನಾಡಿದ ಗುರೂಜಿ ಅವರು, ಹಾಸನಂಬೆ ತಾಯಿಯ ದರ್ಶನ ಮಾಡಿ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ ಎಂದು ಹೇಳಿದರು.
ತಾಯಿಯ ಆಶೀರ್ವಾದದಿಂದ ನಾಡಿನ ಸಮಸ್ತ ಜನರಿಗೆ, ರೈತಾಪಿ ವರ್ಗದವರಿಗೆ ಒಳ್ಳೆಯದಾಗಲಿ ನಾಡು ಸುಭಿಕ್ಷವಾಗಿರಲಿ ಎಂದು ತಾಯಿಯಲ್ಲಿ ಮೊರೆ ಇಟ್ಟಿದ್ದೇನೆ ಎಂದು ತಿಳಿಸಿದರು.
ಹಾಸನ ಜಿಲ್ಲಾಡಳಿತವು ಅಚ್ವುಕಟ್ಟಾಗಿ ಹಾಸನಾಂಬ ದೇವಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿರುವುದರಿಂದ ಲಕ್ಷಾಂತರ ಭಕ್ತಾದಿಗಳಿಗೆ ತಾಯಿಯ ದರ್ಶನ ಮಾಡಲು ಬಹಳ ಅನುಕೂಲವಾಗುತ್ತಿದೆ ಎಂದು ಅರ್ಜುನ ಅವಧೂತ ಗುರೂಜಿ ಹೇಳಿದರು.
ಇದೇ ವೇಳೆ ಜಿಲ್ಲಾಡಳಿತ, ಪೊಲೀಸ್ ಸಿಬ್ಬಂದಿ , ಜನಪ್ರತಿನಿಧಿಗಳು ಹಾಗೂ ಪೌರಾಕಾರ್ಮಿಕರಿಗೆ ಮತ್ತು ಹಾಸನ ಜಿಲ್ಲೆಯ ಜನತೆಗೆ ಗುರೂಜಿ ಅಭಿನಂದನೆ ಸಲ್ಲಿಸಿದರು.