ಹಾಸನದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ನುಗ್ಗಿದ ಟ್ರಕ್: 6 ಮಂದಿ ಸಾ*ವು

Spread the love

(ವರದಿ:ಸಿಬಿಎಸ್)

ಹಾಸನ: ಗಣಪತಿ ವಿಸರ್ಜಿಸಲು ಹೋಗುತ್ತಿದ್ದ ಮೆರವಣಿಗೆ ಮೇಲೆ ಯಮನಂತೆ ಬಂದ ಟ್ರಕ್ ಜನರ ಮೇಲೆ ಹರಿದು ಘನ ಘೋರ ದುರಂತ ಸಂಭವಿಸಿರುವ ಘಟನೆ ಶುಕ್ರವಾರ ಸಂಜೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 323ರ ಪಕ್ಕದ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಈ ಘೋರ ದುರಂತ ಸಂಭವಿಸಿದ್ದು ಸ್ಥಳದಲ್ಲಿ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮುಂದೆ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಟ್ರಕ್ ಚಾಲಕ ಸೈಡ್ ಗೆ‌ ಟ್ರಕ್ ತಿರುಗಿಸಲು ಹೋದಾಗ ನಿಯಂತ್ರಣ ತಪ್ಪಿ ಟ್ರಕ್ ಜನರ ಮೇಲೆಯೇ ಹರಿದಿದೆ.

ಹಾಸನ ಕಡೆಯಿಂದ ಹೊಳೆನರಸೀಪುರ ಕಡೆಗೆ ಟ್ರಕ್ ಬರುತ್ತಿತ್ತು

ಸುಮಾರು 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅಪಘಾತ ಸ್ಥಳದಲ್ಲಿ ಜನರ ಆಕ್ರಂದನ ಹೇಳತೀರದಾಗಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಹೆಚ್.ಡಿ.ರೇವಣ್ಣ ಮತ್ತು ವಿಧಾನ್ ಪರಿಷತ್ ಸದಸ್ಯ ಸೂರಜ್,ಶಾಸಕ ಶ್ರೇಯಸ್ ಪಟೇಲ್ ಮತ್ತಿತರರು ಭೇಟಿ ನೀಡಿ ಗಾಯಾಳುಗಳನ್ನು ಹಾಸನ ಜಿಲ್ಲಾಸ್ಪತ್ರೆಗೆ ಸಾಗಿಸಲು ನೆರವಾದರು.

ಸ್ಥಳಕ್ಕೆ ಎಎಸ್ ಪಿ ತಮ್ಮಯ್ಯ ಮತ್ತಿತರ ಪೊಲೀಸ್ ಅಧಿಕಾರಿಗಳು‌ ಧಾವಿಸಿ ಮುಂದಿನ ಕ್ರಮ ಕೈಗೊಂಡರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೂರಜ್ ರೇವಣ್ಣ ಮಾತನಾಡಿ ಘಟನೆ ನಡೆಯುವ ಸಂದರ್ಭ ದಲ್ಲಿ ಮೆರವಣಿಗೆ ವೇಳೆ ಒಬ್ಬರೇ ಒಬ್ಬ ಪೊಲೀಸರು ಇರಲಿಲ್ಲ ಮಕ್ಕಳು ಸಂಭ್ರಮದಲ್ಲಿ ಡಿಜೆ ಸೌಂಡಿಗೆ ನೃತ್ಯ ಮಾಡುತ್ತಾ ಸಾಗುತ್ತಿದ್ದಾಗ ಟ್ರಕ್ ಯಮನಂತೆ ನುಗ್ಗಿದೆ ಇದನ್ನು ನೋಡಿ ನನಗೆ ಮನಸ್ಸಿಗೆ ತೀವ್ರ ನೋವು ಉಂಟಾಯಿತು ಎಂದು ಹೇಳಿದರು.

ಎಚ್ ಡಿ ರೇವಣ್ಣ ಮಾತನಾಡಿ ಇದಕ್ಕೆ ಕಾರಣ ಪೊಲೀಸರ ವೈಫಲ್ಯ, ರಸ್ತೆಯಲ್ಲಿ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ ವಾಹನ ಸಾಗಲು ಸರಿಯಾದ ವ್ಯವಸ್ತೆ ಮಾಡಿಕೊಟ್ಟಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಮೃತರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.