ಮೈಸೂರು: ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘದ ನೂತನ ಅಧ್ಯಕ್ಷ ಹಾಗೂ ಮೈಸೂರು ಕಾಂಗ್ರೆಸ್ ಮುಖಂಡ ಚಂದ್ರಶೇಖರ್, ಮತ್ತು ಶಾಸಕ ಕೆ.ಹರೀಶ್ ಗೌಡ ಅವರನ್ನು ಅಭಿನಂದಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ದೇವರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ರಾಯಪ್ಪ ಅವರು
ಚಂದ್ರಶೇಖರ್, ಮತ್ತು ಶಾಸಕ ಕೆ.ಹರೀಶ್ ಗೌಡ ಅವರನ್ನು ಸನ್ಮಾನಿಸಿ ಶುಭ ಕೋರಿದರು.
ಈ ವೇಳೆ ನಗರಪಾಲಿಕೆ ಮಾಜಿ ಸದ್ಯಸ ಗೋಪಿ, ಬಾಲು, ಮುಖಂಡರಾದ ಮಂಜುನಾಥ್, ಒಂಟಿಕೊಪ್ಪಲ್ ಗುರು, ಪಡುವಾರಹಳ್ಳಿ ಕುಮಾರ್, ಇಂದಿರಾಗಾಂಧಿ ಬ್ಲಾಕ್ ಕಾರ್ಯದರ್ಶಿ ರಾಮಚಂದ್ರ ಮೂರ್ತಿ ಮತ್ತಿತರರು ಹಾಜರಿದ್ದರು.
