ಹರಿದಾಸ‌ ಸ್ಮರಣೆ ದಾಸ ಕೃತಿ ರಾಜ್ಯ ಮಟ್ಟದ‌ ಗಾಯನ ಸ್ಪರ್ಧೆ

ಮೈಸೂರು: ಸಾಂಸ್ಕೃತಿಕ ‌ನಗರಿ‌ ಅಜ್ಜನ ಮನೆ ಕಲಾ ಪ್ರಪಂಚ ವತಿಯಿಂದ ಹರಿದಾಸ‌ ಸ್ಮರಣೆ ದಾಸ ಕೃತಿ ರಾಜ್ಯ ಮಟ್ಟದ‌ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಯು ನವೆಂಬರ್ 29,30 ಮತ್ತು ಡಿಸೆಂಬರ್ ‌1 ರಂದು ಮೈಸೂರಿನ ನಂಜುಮಳಿಗೆ ವೃತ್ತ ಶ್ರೀ ನಾದಬ್ರಹ್ಮ ಸಂಗೀತ ಸಭಾದಲ್ಲಿ‌ ನಡೆಯಲಿದೆ.

ದಾಸರ‌ ಕೃತಿಗಳನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ‌ಶೈಲಿಯಲ್ಲಿ ಹಾಡುವ ಸ್ಪರ್ಧೆ ಇದಾಗಿದೆ.

ಪ್ರವೇಶ ಉಚಿತವಿದ್ದು,12 ರಿಂದ 18 ವರ್ಷದ ಗಾಯಕರಿಗೆ ಮಾತ್ರ ಅವಕಾಶವಿರುತ್ತದೆ.ಅಕ್ಟೋಬರ್‌ 31,2024 ಕ್ಕೆ 18 ವರ್ಷ ಮೀರಿರಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರವೇಶ‌ ಪತ್ರಕ್ಕೆ 9110453540,8310279953 ವಾಟ್ಸಪ್ ಮೂಲಕವೇ ಕಳುಹಿಸಬೇಕೆಂದು ಕೋರಲಾಗಿದೆ.

ಪ್ರಥಮ ಬಹುಮಾನ-8000ರೂ,
ದ್ವತೀಯ-6000,ತೃತೀಯ-4000 ರೂ ಇರುತ್ತದೆ.

ನಂಬರ್ 1096,ಸಿ ಅಂಡ್ ಡಿ.ಬ್ಲಾಕ್,ಲಲಿತಾದ್ರಿಪುರ ರಸ್ತೆ,ಕುವೆಂಪು ನಗರ ಮೈಸೂರು,570023 ಇದು ವಿಳಾಸ. ಹೆಚ್ಚಿನ ವಿವರವನ್ನು ಮೇಲ್ಕಂಡ ನಂಬರ್ ನಲ್ಲಿ ವಿಚಾರಿಸಬಹುದು.