ಮೈಸೂರು: ಮೈಸೂರಿನ ದಸರಾ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಹಾರ್ಡಿಂಜ್ ವೃತ್ತದಲ್ಲಿ ನಾಡ ಪ್ರಭು ಶ್ರೀ ಕೆಂಪೇಗೌಡರ ದೀಪಾಲಂಕರಿತ ಪುತ್ಥಳಿಯನ್ನು ನಿರ್ಮಿಸಲಾಗಿದ್ದು ಅಭಿಮಾನಿಗಳು ಖುಷಿ ಪಟ್ಟಿದ್ದು ಕಾರಣರಾದವರಿಗೆ ಅಭಿನಂದಿಸಿದ್ದಾರೆ.

ಕೆಂಪೇಗೌಡರ ದೀಪಾಲಂಕರಿತ ಪುತ್ಥಳಿ ಯನ್ನು ನಿರ್ಮಿಸಲು ಕಾರಣಕರ್ತರಾದ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್. ಸಿ ಅವರನ್ನು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಹನುಮಂತಯ್ಯ ಹಾಗೂ ರಘುರಾಮ್ ಅವರುಗಳು ರಮೇಶ್ ಅವರನ್ನು ಗೌರವಿಸಿದರು.