ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಲ್ಯಾಪ್ ಟಾಪ್ ವಿತರಣೆ

Spread the love

ಕೊಳ್ಳೇಗಾಲ: ಗ್ರಾಮ ಪಂಚಾಯಿತಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ(VRW) ಶಾಸಕ ಎಂ.ಆರ್.ಮಂಜುನಾಥ್
ಲ್ಯಾಪ್ ಟಾಪ್ ವಿತರಸಿದರು.

ತಾ.ಪಂ. ನ 2023-24 ನೇ ಸಾಲಿನ ವಿಶೇಷಚೇತನರ ಶೇ.5 ರಷ್ಟು ಅನುದಾನದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಪಾಳ್ಯ ಹೋಬಳಿ ವ್ಯಾಪ್ತಿಯ 9 ಗ್ರಾಮ ಪಂಚಾಯಿತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಮಂಜುನಾಥ್ ರವರು 
ಲ್ಯಾಪ್ ಟಾಪ್ ವಿತರಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಉಚಿತ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮದಲ್ಲಿ 9 ಮಂದಿ ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಫಲಾನುಭವಿಗಳಿಗೆ ಶಾಸಕರು ಲ್ಯಾಪ್ ಟಾಪ್ ವಿತರಣೆ ಮಾಡಿದರು.

ಶಾಂತರಾಜು ಪಾಳ್ಯ, ಸುನಿಲ್ ಚಿಕ್ಕಲ್ಲೂರು, ಮಹಾದೇವಸ್ವಾಮಿ ಕೊಂಗರಹಳ್ಳಿ, ದೀಪಕ್ ತೆಳ್ಳನೂರು, ಮೋಹನ್ ಕುಮಾರ್ ಧನಗೆರೆ, ನಾಗರಾಜು ಸಿಂಗನಲ್ಲೂರು, ಸುಮತಿ ಸತ್ತೇಗಾಲ, ಶಿವಕುಮಾರಿ ಮದುವನಹಳ್ಳಿ, ಆಶಾ ದೊಡ್ಡಿಂದುವಾಡಿ ಗ್ರಾಮ ಪಂಚಾಯಿತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾಗಿದ್ದು ಇವರೆಲ್ಲರೂ ಉಚಿತ ಲ್ಯಾಪ್ ಟಾಪ್ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಆರ್.ಮಂಜುನಾಥ್ ಅವರು ಈಗ ಉಚಿತ ಲ್ಯಾಪ್ ಟಾಪ್ ವಿತರಿಸಲಾಗಿದೆ. ಮುಂದೆ ವಿಶೇಷ ಚೇತರು ಕುಳಿತುಕೊಳ್ಳಲು ಕುರ್ಚಿ, ಟೇಬಲ್ ಹಾಗೂ ಇನ್ನಿತರ ಪರಿಕರಗಳನ್ನು ವಿತರಿಸಲಾಗುವುದು. ಇದರ ಸದುಪಯೋಗ ಪಡೆದುಕೊಂಡು ಮತ್ತಷ್ಟು ಸೇವೆ ಮಾಡುವಂತೆ ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ತಹಶಿಲ್ದಾರ್ ಬಸವರಾಜು, ತಾಲ್ಲೂಕು ಪಂಚಾಯತ್ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಎಂ.ಆರ್.ಡಬ್ಲ್ಯೂ ಕವಿರತ್ನ ಹಾಜರಿದ್ದರು.