ಸಿ.ಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕಮಂಜುನಾಥ್ ಗುದ್ದಲಿ ಪೂಜೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.6: ತಾಲೂಕಿನ ಸತ್ತೇಗಾಲ ಗ್ರಾಮದ ಸಿಎಂ ಸಮುದ್ರದ ಎಜೆ ಕಾಲೋನಿಯಲ್ಲಿ 50 ಲಕ್ಷ ರೂ ವೆಚ್ಚದ ಸಿ.ಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು ಸಮಾಜ ಕಲ್ಯಾಣ ಇಲಾಖೆಯ ಎಸ್ ಸಿ ಪಿ ಅನುದಾನದಲ್ಲಿ ಸಿಎಂ ಸಮುದ್ರ ಎ.ಜೆ.ಕಾಲೋನಿಯಲ್ಲಿ ಸಿ.ಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಗೆ 50 ಲಕ್ಷ ರೂ ಮಂಜೂರಾಗಿದ್ದು 16 ಲಕ್ಷ ಬಿಡುಗಡೆಯಾಗಿದೆ ಎಂದು ಹೇಳಿದರು.

ಇಷ್ಟೇ ಅಲ್ಲದೆ ಕಾಲೋನಿಗೆ ಇನ್ನೂ ಸಾಕಷ್ಟು ಕಾಮಗಾರಿಗಳ ಅವಶ್ಯಕತೆ ಇದ್ದು ಮುಂದೆ ಹಂತ ಹಂತವಾಗಿ ಕಾಲೋನಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ಗ್ರಾಮದ ಅಭಿವೃದ್ಧಿಗೆ ಎರಡು ಕೋಟಿ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಒಂದು ಕೋಟಿಗೂ ಹೆಚ್ಚು ಅನುದಾನ ಈ ಪಂಚಾಯಿತಿಗೆ ಮಂಜೂರಾಗಿದ್ದು 35 ಲಕ್ಷ ರೂ. ಬಿಡುಗಡೆಯಾಗಿದೆ ಇನ್ನು 10 ಲಕ್ಷ ರೂ. ಅನುದಾನ ಬಿಡುಗಡೆಯಾಗಬೇಕು. ಪ್ರತಿ ಗ್ರಾಮಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕರು ಆಶ್ವಾಸನೆ ನೀಡಿದರು.

ಸಾಮಾನ್ಯ ಅನುದಾನ ನಂಬಿಕೊಂಡರೆ ಕೆಲಸ ಆಗುವುದಿಲ್ಲ ವಿಶೇಷ ಅನುದಾನವನ್ನು ತಂದು ಕೆಲಸ ಮಾಡಬೇಕಿದೆ ಎಂದ ಮಂಜುನಾಥ್, ಗುಣಮಟ್ಟದ ಕೆಲಸ ಮಾಡಿ ಯಾವುದೇ ಕಾರಣಕ್ಕೂ ರಾಜೀ ಸಂದಾನಕ್ಕೆ ಅವಶಕಾವಿಲ್ಲ. ಮಾಡಿರುವ ಕಾಮಗಾರಿಗಳ ವಿವರದ ಫೋಟೋಗಳನ್ನು ಗ್ರೂಪ್ ಮಾಡಿ ಅಪ್ಲೋಡ್ ಮಾಡಿ ಎಂದು ಚಿಕ್ಕಲಿಂಗಯ್ಯ ರವರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಭವನ ಕಾಮಗಾರಿಗೆ ಪದೇ ಪದೇ ತೊಡಕಾಗುತ್ತಿದೆ. ಹಾಗೂ ಸರ್ಕಾರ ಜಾಗ ಗುರುತಿಸಿದೆ ಆದರೆ ಅಂತ್ಯಸಂಸ್ಕಾರ ಮಾಡಲು ಜೇನು ಹುಳುವಿನ ಕಾಟ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.

ಅಧ್ಯಕ್ಷ ಎಂ.ಮಲ್ಲೇಶ್, ಉಪಾಧ್ಯಕ್ಷೆ ಸುವರ್ಣ, ಸದಸ್ಯರಾದ ದೇವಿಕಾ, ಕವಿತಾ, ಗೋವಿಂದ, ಶಾಂತಕುಮಾರಿ ಅರ್ಚಕರಾದ ಚಿಕ್ಕರವಳಿ, ಕಾಂತಣ್ಣ ಹಾಗೂ ಗ್ರಾಮಸ್ಥರು ಮತ್ತು ಕೆ.ಆರ್.ಎ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ ಹಾಜರಿದ್ದರು.