ಸ್ನೇಹಿತರ ಬಳಗದಿಂದ ಹನುಮ ಜಯಂತಿ

Spread the love

ಮೈಸೂರು: ಮೈಸೂರಿನ‌ 23ನೇ ವಾರ್ಡಿನ ಸ್ನೇಹಿತರ ಬಳಗದ ವತಿಯಿಂದ ಹನುಮ ಜಯಂತಿ ಹಮ್ಮಿಕೊಳ್ಳಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಸ್ನೇಹಿತರ ಬಳಗದ ವತಿಯಿಂದ ಆರ್. ಪರಮೇಶ್ ನೇತೃತ್ವದಲ್ಲಿ ಹನುಮ ಜಯಂತಿಯ ಅಂಗವಾಗಿ ಸದ್ವಿದ್ಯಾ ಶಾಲೆಯ ವೃತ್ತದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪುರೋಹಿತರಾದ ರಾಘವೇಂದ್ರ ಅವರ ಸಮ್ಮುಖದಲ್ಲಿ
ವಿಶೇಷ ಪೂಜೆ ನೆರವೇರಿಸಲಾಯಿತು.

ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.‌

ಈ ಸಂದರ್ಭದಲ್ಲಿ ಸುರೇಂದ್ರ, ನಾಗೇಶ್ ಯಾದವ್, ವಿನೋದ್ ಅರಸ್, ಪಿಂಕಿ, ಗೀತಾ ಶ್ರೀನಿವಾಸ್, ಪ್ರೂಪೆಸರ್ ಶರ್ಮ ಮುಂತಾದವರು ಉಪಸ್ಥಿತರಿದ್ದರು.