ಪೋಕ್ಸೋ ಪ್ರಕರಣ; ಅಪರಾಧಿಗೆ ಗಲ್ಲು ಶಿಕ್ಷೆ

Spread the love

ಬೆಳಗಾವಿ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪೋಕ್ಸೊ ಪ್ರಕರಣದಲ್ಲಿ ಬೆಳಗಾವಿಯಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಏಳು ವರ್ಷದ ಹಿಂದೆ ಬೆಳಗಾವಿ ಜಿಲ್ಲೆ ಹಾರೂಗೇರಿಯ 3 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಹತ್ಯೆಗೈದಿದ್ದ ಪ್ರಕರಣಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

21.9.2017 ರಂದು ಸುಧಾ ಅಪ್ಪಾಸಾಬ ಸನ್ನಕ್ಕಿನವರ ಎಂಬವರು ತನ್ನ 3 ವರ್ಷದ ಮಗಳ ಅಪಹರಣ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

21-09-2017 ರಂದು ಉದ್ದಪ್ಪ ರಾಮಪ್ಪ ಗಾಣಿಗೇರ (32) ಎಂಬಾತ ನಮ್ಮ ಮನೆಯ ಮುಂದೆ ಮಗಳನ್ನು ಅಪಹರಣ ಮಾಡಿದ್ದ ಎಂದು ದೂರು ನೀಡಿದ್ದರು.

ಹಾರೂಗೇರಿ ಪೊಲೀಸ್ ಠಾಣೆ‌ಯ
ಪಿಎಸ್‌ಐ ದೂರು ಸ್ವೀಕರಿಸಿಕೊಂಡು ತನಿಖೆ ಕೈಕೊಂಡಿದ್ದರು.

ಉದ್ದಪ್ಪ ರಾಮಪ್ಪ ಗಾಣಿಗೇರ ಮೂರು ವರ್ಷದ ಮಗುವನ್ನು ಅಪಹರಿಸಿ ಕುರಬಗೋಡಿಯಲ್ಲಿರುವ ಭೀಮಪ್ಪ ನೇಮಣ್ಣ ನಾಗನೂರ ಅವರ ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಮುಖದಿಂದ ಸೊಂಟದವರೆಗೆ ಮಣ್ಣು ಮುಚ್ಚಿಬಿಟ್ಟಿದ್ದ.

ತನಿಖಾಧಿಕಾರಿಯಾದ ಸಿಪಿಐ ಸುರೇಶ. ಪಿ. ಶಿಂಗಿ ಉದ್ದಪ್ಪ ಅವರು ರಾಮಪ್ಪ ಗಾಣಿಗೇರ ವಿರುದ್ಧ 8.12.2017 ರಂದು ದೋಷಾರೋಪಣ ಪಟ್ಟಿ ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಕೈಕೊಂಡು ಪ್ರಕರಣದ ಬಗ್ಗೆ ಸರ್ಕಾರಿ ಅಭಿಯೋಜಕ
ಎಲ್. ಬಿ. ಪಾಟೀಲ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಉದ್ದಪ್ಪ ರಾಮಪ್ಪ ಗಾಣಿಗೇರ ಅಪರಾಧಿ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ
ನ್ಯಾಯಾಲಯವು ಆತನಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.