ಮೈಸೂರು:
‘ನಾನೊಬ್ಬ ಕಾಲಿಲ್ಲದ ಅಂಗವಿಕಲ
ನನಗೆ ಕೊಡಿ ನಿಮ್ಮ ಹೆಗಲ
ನನ್ನ ಮನಸ್ಸಿನಲ್ಲಿದೆ ಬೆಟ್ಟದಷ್ಟು ಛಲ
ನನಗೆ ಬೇಕಾಗಿದೆ ನಿಮ್ಮೆಲ್ಲರ ಬೆಂಬಲ’…
ಇದೊಂದು ಚುಟುಕು ಕವನ.ಇದನ್ನ ಗಣೇಶ್ ಕುಮಾರ್ ಶರ್ಮ ಎಂಬವರು ಬರೆದಿದ್ದರೆ.ಆದರೆ ಬಹಳ ಅರ್ಥಗರ್ಭಿತವಾಗಿದೆ.
ಈ ಕವನವೇ ಗಣೇಶ್ ಅವರ ಜೀವನ ಹೇಗಿದೆ ಎಂಬುದನ್ನು ತಿಳಿಸಿಬಿಡುತ್ತದೆ.
ಗಣೇಶ್ ಅವರು ಮೈಸೂರಿನ ಬೆಳವಾಡಿಯಲ್ಲಿ ವಾಸಿಸುತ್ತಿದ್ದಾರೆ ಅವರಿಗೆ ಈಗ 37ನೇ ವರ್ಷ, ಹುಟ್ಟಿನಿಂದ ಅವರು ಎಲ್ಲರಂತೆ ಚೆನ್ನಾಗಿಯೇ ಇದ್ದರು.
ಆದರೆ ವಿಧಿಯ ಆಟದಲ್ಲಿ ಗಣೇಶ್ ಕಾಲು ಕಳೆದುಕೊಂಡಿದ್ದಾರೆ. ಗಣೇಶ ಅವರು ಎಸ್ಎಸ್ಎಲ್ ಸಿ ಪಾಸ್ ಮಾಡಿದ್ದು, ಐಟಿಐ ಫೇಲ್ ಆಗಿದ್ದಾರೆ. ಅದು ಹೇಗೋ ಕಷ್ಟ ಪಟ್ಟು ಟೈಟಾನ್ ವಾಲ್ಸ್ ನಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದರು.
9 ವರ್ಷ ಆ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ,ಜೀವನ ಚೆನ್ನಾಗಿತ್ತು ಆದರೆ ವಿಧಿಯಾಟ ಬಲ್ಲವರು ಯಾರೂ ಇಲ್ಲವಲ್ಲ.2016 ಡಿಸೆಂಬರ್ 7 ರಂದು ಅವರು ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದಾಗ ಎದುರಿನಿಂದ ಅತಿ ವೇಗವಾಗಿ ಬಂದ ಮತ್ತೊಂದು ದ್ವಿಚಕ್ರವಾಹನ ಡಿಕ್ಕಿ ಹಿಡೆದು ನಿಲ್ಲಿಸದೆ ಹೋಗಿಬಿಟ್ಟಿದೆ.

ಅಪಘಾತದ ರಭಸಕ್ಕೆ ಗಣೇಶ್ ಅವರು ಸಮೀಪದಲ್ಲಿದ್ದ ಚರಂಡಿಗೆ ಬಿದ್ದಿದ್ದಾರೆ, ಜ್ಞಾನ ತಪ್ಪಿದೆ. ಯಾರೋ ಸ್ಥಳೀಯರು ಬೈಕ್ ಬಿದ್ದಿದ್ದನ್ನು ಕಂಡು ಚರಂಡಿಯಲ್ಲಿ ನೋಡಿದಾಗ ಗಣೇಶ ಇರುವುದು ಗೊತ್ತಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ, ಆದರೆ ಅವರ ಬಲದ ಕಾಲಿನ ಮಂಡಿಯ ಚಿಪ್ಪು ಮುರಿದು ಹೋಗಿತ್ತು ಅದನ್ನು ಸೇರಿಸಲು ಸಾಧ್ಯವಾಗಿಲ್ಲ ಹಾಗಾಗಿ ವೈದ್ಯರು ಕಾಲನ್ನು ಅರ್ಧಕ್ಕೆ ತೆಗೆದು ಹಾಕಿದ್ದಾರೆ. ಆಸ್ಪತ್ರೆಯಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆದ ನಂತರ ಗಣೇಶ ಅವರು ಕೃತಕ ಕಾಲನ್ನು ಬಳಸಿ ಓಡಾಡಲು ಆರಂಭಿಸಿದ್ದಾರೆ.

ಛಲ ಬಿಡದೆ ಮತ್ತೆ ತಾವು ಕೆಲಸ ಮಾಡುತ್ತಿದ್ದ ಅದೇ ಕಂಪನಿಗೆ ಎರಡು,ಮೂರು ಬಾರಿ ಹೋಗಿ ಕೆಲಸ ಕೇಳಿದ್ದಾರೆ ಆದರೆ ಅವರು ನೀವು ಅಂಗವಿಕಲರು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅವರನ್ನು ಕೆಲಸಕ್ಕೆ ತೆಗೆದುಕೊಂಡಿಲ್ಲ.
ಆಸ್ಪತ್ರೆಗೆ ಸುಮಾರು 5 ಲಕ್ಷದವರೆಗೂ ವೆಚ್ಚವಾಯಿತು.ಒಂದು ಲಕ್ಷ ರೂಗಳನ್ನ ಕಷ್ಟಪಟ್ಟು ತೀರಿಸಿದ್ದೇವೆ.ಇನ್ನೂ 4 ಲಕ್ಷ ಸಾಲ ಇದೆ ಅದನ್ನು ತೀರಿಸಬೇಕು.ಆದರೆ ಹೇಗೆ ಎಂಬ ಚಿಂತೆ ಕಾಡುತ್ತಿದೆ ಎಂದು ಹೇಳುತ್ತಾರೆ ಗಣೇಶ್.
ವಿಧಿ ಇಲ್ಲದೆ ಗಣೇಶ್ ಅಲ್ಲಿಇಲ್ಲಿ ಸಣ್ಣಪುಟ್ಟ ಕೆಲಸ,ಸೆಕ್ಯೂರಿಟಿ ಕೆಲಸವನ್ನು ಮಾಡಿದ್ದಾರೆ ಆದರೆ ಅಲ್ಲೂ ಕೂಡ ಇವರನ್ನು ಕೆಲಸಕ್ಕೆ ಇಟ್ಟುಕೊಳ್ಳದೆ ವಾಪಸ್ ಕಳುಹಿಸಿ ಬಿಟ್ಟಿದ್ದಾರೆ.ಆದ್ದರಿಂದ ಏನೂ ಮಾಡಲು ಸಾಧ್ಯವಿಲ್ಲದೆ ಮನೆಯಲ್ಲಿದ್ದಾರೆ.
ಇವರಿಗೆ ತಂದೆ ಇಲ್ಲ, ತಾಯಿ ಅಡುಗೆ ಕೆಲಸ ಮಾಡುತ್ತಾ ಇವರನ್ನು ನೋಡಿಕೊಳ್ಳುತ್ತಿದ್ದಾರೆ.
ಗಣೇಶ್ ಅವರು ಕಾಲು ಇಲ್ಲದಿದ್ದರೂ ಸುಮ್ಮನೆ ಕುಳಿತುಕೊಂಡಿಲ್ಲ. ತನ್ನಿಂದಾದ ಸಹಾಯವನ್ನು ಜನರಿಗೆ ಮಾಡುತ್ತಾರೆ. ತಮ್ಮಂತಹ ಅಂಗವಿಕಲರಿಗೆ ಯುಡಿ,ಐಡಿ ಕಾರ್ಡ್ ಸೇರಿದಂತೆ ಏನು ಸಹಾಯ ಬೇಕಾದರೂ ಕರೆದುಕೊಂಡು ಹೋಗಿ ಮಾಡಿಸಿಕೊಡುತ್ತಾರೆ.
ಅಷ್ಟೇ ಅಲ್ಲ ಸುಮಾರು ವರ್ಷಗಳಿಂದ ರಕ್ತದಾನ ಮಾಡುತ್ತಾ ಸಮಾಜ ಸೇವೆಯಲ್ಲೂ ನಿರತರಾಗಿದ್ದಾರೆ. 2008ರಿಂದಲೂ ಇವರು ರಕ್ತದಾನಿಗಳು ಎಂಬುದು ವಿಶೇಷ.120 ಮಂದಿಗೆ ರಕ್ತದ ಏರ್ಪಾಟು ಮಾಡಿಕೊಟ್ಟಿದ್ದಾರೆ.ಅಲ್ಲದೆ 36 ಬಾರಿ ತಾವೇ ಖುದ್ದಾಗಿ ರಕ್ತದಾನ ಮಾಡಿದ್ದಾರೆ. ಹಲವಾರು ಮಂದಿಗೆ ಈ ಮೂಲಕ ಜೀವದಾನ ಮಾಡಿದ್ದಾರೆ.

ಕ್ರೀಡೆಯಲ್ಲಿ ಗಣೇಶ್ ಅವರಿಗೆ ಆಸಕ್ತಿ ಇದೆ.ಈಗ ವಿಕಲಚೇತನರಾದರೂ ವ್ಹೀಲ್ ಚೇರ್ ಕ್ರಿಕೆಟ್ ಆಡುತ್ತಾರೆ.ವ್ಹೀಲ್ ಚೇರ್ ಕಬ್ಬಡಿ ಆಡುತ್ತಾರೆ.2022ರಲ್ಲಿ ಜಿಲ್ಲಾ ಮಟ್ಟದಲ್ಲಿ ಆಡುವ ಮೂಲಕ ದ್ವತೀಯ ಬಹುಮಾನ ಕೂಡಾ ಪಡೆದಿದ್ದಾರೆ.
ಗಣೇಶ್ ಅವರಲ್ಲಿ ಒಂದು ರೀತಿ ಬಹುಮಖ ಪ್ರತಿಭೆ ಇದೆ.ಅವರು ಚುಟುಕು ಕವನಗಳನ್ನು ಬರೆದು ಸೈ ಎನಿಸಿ ಕೊಂಡಿದ್ದಾರೆ.2023ರಲ್ಲಿ ಎಸ್ ಎಸ್ ಕಲಾಸಂಗಮ ಸಂಸ್ಥೆಯ ವರು ಆಯೋಜಿಸಿದ್ದ ಚುಟುಕು ಕವನ ಸ್ಪರ್ಧೆಯಲ್ಲಿ ಗಣೇಶ್ ಅವರಿಗೆ ಪ್ರಥಮ ಬಹುಮಾನ ಕೂಡಾ ಲಭ್ಯವಾಗಿದೆ.
ಇವರ ಸೇವೆಯನ್ನು ಗಮನಿಸಿ ಅನೇಕರು ಪ್ರಶಸ್ತಿಗಳನ್ನು ಕೊಟ್ಟಿದ್ದಾರೆ. ಆದರೆ ಗಣೇಶ ಅವರು ಕೆಲಸ ಮಾಡುವ ಛಲ ನನ್ನಲ್ಲಿದೆ, ಪ್ರಶಸ್ತಿಯನ್ನು ಪಡೆದುಕೊಂಡು ನಾನು ಜೀವಿಸಲಾಗುವುದಿಲ್ಲ ನನಗೆ ಯಾರಾದರೂ ಕೆಲಸ ಕೊಟ್ಟರೆ ನಿರ್ವಹಿಸುತ್ತೇನೆ ದಯಮಾಡಿ ಬದುಕಲು ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ಗಣೇಶ್ ಅವರಿಗೆ ಸಹಾಯಮಾಡ ಬಯಸುವವರು ಈ ಕೆಳಗಿನ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಅಕೌಂಟ್ ಗೆ ಆರ್ಥಿಕ ನೆರವು ನೀಡಬಹುದುದಾಗಿದೆ.
ಗಣೇಶ್ ಕುಮಾರ್ ಶರ್ಮ ಎಂ.ಸ್ಟೇಟ್ ಬ್ಯಾಂಕ್ ಇಂಡಿಯ ಅಕೌಂಟ್ ನಂಬರ್-
40819412247 ಐಎಫ್ ಎಸ್ ಸಿ ಕೋಡ್- ಎಸ್ ಬಿ ಐಎನ್ 0006768,ಬೆಳವಾಡಿ ಬ್ರಾಂಚ್ ಹಾಗೂ ಗೂಗಲ್ ಪೆ/ಫೋನ್ ಪೆ ನಂಬರ್ 7090156688 ಗೆ ಹಣ ಸೆಂಡ್ ಮಾಡಬಹುದು.